ಆಯುಧ ಪರವಾನಿಗೆ ಆನ್‌ಲೈನ್‌ನಲ್ಲಿ ಲಭ್ಯ

Update: 2020-12-06 15:15 GMT

ಉಡುಪಿ, ಡಿ. 6: ಭಾರತೀಯ ಶಸ್ತ್ರಾಸ್ತ್ರ ತಿದ್ದುಪಡಿ ಕಾಯ್ದೆಯ ಪ್ರಕಾರ ಆತ್ಮರಕ್ಷಣೆ ಹಾಗೂ ಬೆಳೆ ರಕ್ಷಣೆಗಾಗಿ ಅಧಿಕೃತ ಶಸ್ತ್ರಾಸ್ತ್ರ ಪರವಾನಿಗೆ ದಾರರು ತಮ್ಮ ಶಸ್ತ್ರಾಸ್ತ್ರ ಪರವಾನಿಗೆಯಲ್ಲಿ ಮೂರನೇ ಆಯುಧವನ್ನು ಹೊಂದಲು ಅವಕಾಶ ವಿರುವುದಿಲ್ಲ ಮತ್ತು ತಮ್ಮ ಶಸ್ತ್ರಾಸ್ತ್ರ ಪರವಾನಿಗೆ ಯಲ್ಲಿ ಗರಿಷ್ಟ 2 ಶಸ್ತ್ರಾಸ್ತ್ರವನ್ನು ಹೊಂದಲು ಮಾತ್ರ ಅವಕಾಶವಿರುತ್ತದೆ.

ಆದ್ದರಿಂದ ಎಲ್ಲಾ ಪರವಾನಿಗೆದಾರರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ ಮೂರನೇ ಶಸ್ತ್ರಾಸ್ತ್ರವನ್ನು ಡಿ.13ರೊಳಗೆ ಹತ್ತಿರದ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಿ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡಬೇಕು ಹಾಗೂ ಶಸ್ತ್ರಾಸ್ತ್ರವನ್ನು ಮಾರಾಟ ಮಾಡುವ ಮೂಲಕವಿಲೇವಾರಿ ಮಾಡಬೇಕು. ಉಲ್ಲಂಘನೆಯಾದಲ್ಲಿ ಅಂತಹ ಪರವಾನಿಗೆದಾರರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವುದು.

ಆಯುಧ ಪರವಾನಿಗೆ ಕೋರಿ ಅರ್ಜಿ ಸಲ್ಲಿಸುವವರು ಆನ್‌ಲೈನ್ ಮೂಲಕ -www.mha.gov.in-ರಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿ ಗಾಗಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯ ದೂರವಾಣಿ ಸಂಖ್ಯೆ: 0820-2574925 ಅಥವಾ ಟೋಲ್‌ಫ್ರೀ ನಂಬರ್:1077ನ್ನು ಸಂಪರ್ಕಿಸಿ ಮಾಹಿತಿ ಪಡೆದು ಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News