ಮುಕ್ತ ವಿವಿ ಪ್ರವೇಶ ಅವಧಿ ವಿಸ್ತರಣೆ

Update: 2020-12-06 15:17 GMT

ಉಡುಪಿ, ಡಿ.6: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ನಾತಕ ಪದವಿಗಳಾದ ಬಿ.ಎ/ಬಿ.ಕಾಂ, ಬಿ.ಲಿಬ್.ಐ.ಎಸ್ಸಿ. ಮತ್ತು ಸ್ನಾತಕೋತ್ತರ ಪದವಿಗಳಾದ ಎಂ.ಎ/ಎ.ಕಾಂ.., ಎಂ.ಎಸ್ಸಿ/ಎಂ.ಲಿಬ್.ಐಸ್ಸಿ, ಎಂ.ಬಿ.ಎ ಹಾಗೂ ಡಿಪ್ಲೊಮ, ಪಿಜಿ ಡಿಪ್ಲೊಮ ಮತ್ತು ಸರ್ಟಿಫಿಕೇಟ್ ಕೊರ್ಸ್‌ಗಳ ಪ್ರವೇಶದ ಅವಧಿಯನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ.

ಈ ಕುರಿತುಹೆಚ್ಚಿನ ವಿವರಗಳಿಗೆ -www.ksoumysuru.ac.in- ವೆಬ್‌ಸೈಟ್ ಅಥವಾ ಉಡುಪಿ ಪ್ರಾದೇಶಿಕ ಕೇಂದ್ರ ಕಚೇರಿ ದೂರವಾಣಿ ಸಂಖ್ಯೆ: 0820- 2522247ನ್ನು ಸಂಪರ್ಕಿಸುವಂತೆ ಉಡುಪಿ ಪ್ರಾದೇಶಿಕ ನಿರ್ದೇಶಕ ಡಾ. ಕೆ.ಪಿ. ಮಹಾಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News