ಉಡುಪಿ ಗ್ರಾಮ ಪಂಚಾಯತ್ ಚುನಾವಣೆ : ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

Update: 2020-12-07 16:19 GMT

ಉಡುಪಿ, ಡಿ.7: ಜಿಲ್ಲೆಯ ಉಡುಪಿ ತಾಲೂಕಿನ 16 ಗ್ರಾಮ ಪಂಚಾಯತಿಗಳ 329 ಸದಸ್ಯ ಸ್ಥಾನಗಳಿಗೆ, ಬ್ರಹ್ಮಾವರ ತಾಲೂಕಿನ 27 ಗ್ರಾಪಂ ಗಳ 412 ಸದಸ್ಯ ಸ್ಥಾನಗಳಿಗೆ, ಬೈಂದೂರು ತಾಲೂಕಿನ 15 ಗ್ರಾಪಂಗಳ 259 ಸದಸ್ಯ ಸ್ಥಾನಗಳಿಗೆ ಹಾಗೂ ಹೆಬ್ರಿ ತಾಲೂಕಿನ 9 ಗ್ರಾಪಂಗಳ 122 ಸದಸ್ಯ ಸ್ಥಾನಗಳು ಸೇರಿದಂತೆ ಒಟ್ಟು ನಾಲ್ಕು ತಾಲೂಕುಗಳ, 67 ಗ್ರಾಪಂಗಳ, 415 ಕ್ಷೇತ್ರಗಳ, 1122 ಸದಸ್ಯ ಸ್ಥಾನಗಳಿಗೆ ಮೊದಲ ಹಂತದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದ ಪ್ರಾರಂಭಗೊಂಡಿದೆ.

ಡಿಸೆಂಬರ್ 22ರ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಡಿ.11 ಕೊನೆಯ ದಿನವಾಗಿದೆ. ಡಿ.12ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಗಳನ್ನು ಹಿಂತೆಗೆದು ಕೊಳ್ಳಲು ಡಿ.14 ಕೊನೆಯ ದಿನವಾಗಿದೆ. ಮತಗಳ ಎಣಿಕೆಯು ಡಿ.30ರಂದು ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News