ಉಡುಪಿ ಗ್ರಾಪಂ ಚುನಾವಣೆ: ಮೊದಲ ದಿನ 157 ನಾಮಪತ್ರ ಸಲ್ಲಿಕೆ

Update: 2020-12-07 16:30 GMT

ಉಡುಪಿ, ಡಿ.7: ಡಿ.22ರಂದು ನಡೆಯುವ ಗ್ರಾಪಂ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ನಾಮಪತ್ರ ಸಲ್ಲಿಕೆ ಇಂದು ಪ್ರಾರಂಭ ಗೊಂಡಿದ್ದು, ಮೊದಲ ದಿನದಂದು ಜಿಲ್ಲೆಯಲ್ಲಿ ಒಟ್ಟು 157 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ತಾಲೂಕಿನ 16 ಗ್ರಾಪಂಗಳ 329 ಸ್ಥಾನಗಳಿಗೆ ಇಂದು 25 (19ಪುರುಷರು+6 ಮಹಿಳೆಯರು), ಹೆಬ್ರಿ ತಾಲೂಕಿನ 9 ಗ್ರಾಪಂಗಳ 122 ಸ್ಥಾನಗಳಿಗೆ 12 (8+4), ಬೈಂದೂರು ತಾಲೂಕಿನ 15 ಗ್ರಾಪಂಗಳ 259 ಸ್ಥಾನಗಳಿಗೆ 67 (41+26) ಹಾಗೂ ಬ್ರಹ್ಮಾವರ ತಾಲೂಕಿನ 27 ಗ್ರಾಪಂಗಳ 412 ಸ್ಥಾನಗಳಿಗೆ 53 (38+15) ನಾಮಪತ್ರಗಳು ಸಲ್ಲಿಕೆಯಾಗಿವೆ.

ಈ ಮೂಲಕ ಒಟ್ಟು ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಒಟ್ಟು 67 ಗ್ರಾಪಂಗಳ 1122 ಸ್ಥಾನಗಳಿಗೆ ಇಂದು 157 ನಾಮಪತ್ರಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ 106 ಮಂದಿ ಪುರುಷರು ಹಾಗೂ 51 ಮಂದಿ ಮಹಿಳೆಯರು ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮೊದಲ ದಿನದಂದು ಪರಿಶಿಷ್ಟ ಜಾತಿಗೆ ಸೇರಿದ 8 ಮಂದಿ (1ಪುರುಷ+7 ಮಹಿಳೆ), ಪರಿಶಿಷ್ಟ ಪಂಗಡಕ್ಕೆ ಸೇರಿದ 4(1+3), ಹಿಂದುಳಿದ ವರ್ಗ ‘ಎ’ಗೆ ಸೇರಿದ 26 (17+9), ಹಿಂದುಳಿದ ವರ್ಗ ‘ಬಿ’ಗೆ ಸೇರಿದ 10 (4+6) ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದ 109 (83+26) ಮಂದಿ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News