ವಿಶ್ವಮಟ್ಟದಲ್ಲಿ ಶೇ.2 ಉನ್ನತ ಶ್ರೇಣಿಯೊಳಗಿನ ವಿಜ್ಞಾನಿಯಾಗಿ ಡಾ. ಮಂಜೇಶ್ವರ ಶ್ರೀನಾಥ್ ಬಾಳಿಗಾಗೆ ಗೌರವ

Update: 2020-12-11 10:25 GMT

ಮಂಗಳೂರು, ಡಿ.8: ಮ್ಯಾಂಗಳೂರ್ ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿಯ ಹಿರಿಯ ಕಿರಣ ಜೀವಶಾಸ್ತ್ರಜ್ಞ ಡಾ. ಮಂಜೇಶ್ವರ ಶ್ರೀನಾಥ್ ಬಾಳಿಗಾ ಅವರು ಆಂಕಾಲಜಿ ಹಾಗೂ ಕಾರ್ಸಿನೋಜೆನೆಸಿಸ್ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿಯೇ ಶೇ.2 ಉನ್ನತ ಶ್ರೇಣಿಯೊಳಗಿನ ವಿಜ್ಞಾನಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಅಮೆರಿಕಾ ಸಾನ್‌ಪೋರ್ಡ್ ವಿವಿಯ ಡಾ. ಜಾನ್ ಪಿ.ಎ. ಇಯಾನಿಡೀಸ್ ಅವರು ಆಂಕಾಲಜಿ ಹಾಗೂ ಕಾರ್ನಿನೋಜೆನಿಸಿಸ್ ವಿಷಯದಲ್ಲಿ ನಡೆಸಿರುವ ಅಧ್ಯಯನದಲ್ಲಿ ಡಾ. ಬಾಳಿಗಾ ವಿಶ್ವಮಟ್ಟದ 3.58 ಅಂಕಗಳಲ್ಲಿ ಶೇ.1.38 ಅಂಕಗಳಿಸುವ ಮೂಲಕ ಶೇ.2ರೊಳಗಿನ ವಿಶ್ವದ ಉನ್ನತ ಶ್ರೇಣಿಯ ವಿಜ್ಞಾನಿಗಳಲ್ಲಿ ಓರ್ವರು ಎಂದು ಗುರುತಿಸಲ್ಪಟ್ಟಿದ್ದಾರೆ. ಅಲ್ಲದೆ ಭಾರತದ ಏಳನೇ ಮತ್ತು ಕರ್ನಾಟಕದಲ್ಲಿಯೇ ಮೊದಲಿಗರು ಎಂಬ ಗರಿಮೆಗೆ ಪಾತ್ರರಾಗಿದ್ದಾರೆ.

ಅಮೆರಿಕಾ ಮೂಲದ ವಿವಿಯು ವಿಶ್ವದಾದ್ಯಂತದ 1 ಲಕ್ಷ ವಿಜ್ಞಾನಿಗಳ ಪ್ರಕಾಶಿತ ಗ್ರಂಥಗಳು, ಸಹಕರ್ತ ಮತ್ತು ಸಂಯೋಜಿತ ಸೂಚ್ಯಂಕಗಳ ಬಗ್ಗೆ ವಿಶ್ವದ ಅಗ್ರ ಎಲ್ಸಿಯರ್ ಪ್ರಕಾಶಿತ ಸ್ಕೋಪಸ್ ಡಾಟಾ ಬೇಸ್ ಒದಗಿಸಿರುವ ಶ್ಲೇತ ಮಾಹಿತಿಗಳ ಆಧಾರದ ಮೇಲೆ 1960ರಿಂದ 2020ರ ಮೇ 6ರವರೆಗಿನ ಅವರ ವೃತ್ತಿ ಜೀವನದುದ್ದಕ್ಕೂ ಈ ವಿಷಯಗಳಲ್ಲಿ ಪ್ರಭಾವ ಬೀರಿರುವ ಮಾಹಿತಿಗಳ ಕೋಷ್ಠಕದ ಅಂಕಿ ಅಂಶಗಳ ಆಧಾರದ ನೆಲೆಯಲ್ಲಿ ಇದನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News