ದ.ಕ. ಜಿಲ್ಲೆ ಗ್ರಾಪಂ ಚುನಾವಣೆ; ಎರಡನೇ ದಿನ 38 ನಾಮಪತ್ರ ಸಲ್ಲಿಕೆ

Update: 2020-12-08 15:45 GMT

ಮಂಗಳೂರು, ಡಿ.8: ದ.ಕ. ಜಿಲ್ಲೆಯಲ್ಲಿ ನಡೆಯಲಿರುವ ಮೊದಲ ಸುತ್ತಿನ ಗ್ರಾಪಂ ಚುನಾವಣೆಗೆ ಎರಡನೆಯ ದಿನವಾದ ಮಂಗಳವಾರ 38 ನಾಮಪತ್ರಗಳು ಸಲ್ಲಿಕೆಯಾಗಿವೆ.

ಮಂಗಳೂರು ತಾಲೂಕಿನಲ್ಲಿ ಎಂಟು, ಮೂಡುಬಿದಿರೆಯಲ್ಲಿ ಮೂರು ಮತ್ತು ಬಂಟ್ವಾಳ ತಾಲೂಕಿನಲ್ಲಿ 27 ನಾಮಪತ್ರಗಳು ಸಲ್ಲಿಕೆಯಾಗಿವೆ. ಮೊದಲ ದಿನವಾದ ಸೋಮವಾರ ಮಂಗಳೂರಿನಿಂದ ಆರು, ಮೂಡುಬಿದಿರೆಯಲ್ಲಿ ಎರಡು ಮತ್ತು ಬಂಟ್ವಾಳ ತಾಲೂಕಿನಲ್ಲಿ 22 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಎರಡು ದಿನಗಳಲ್ಲಿ ಒಟ್ಟು 68 ನಾಮಪತ್ರಗಳು ಸಲ್ಲಿಕೆಯಾಗಿವೆ.

ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿದೆ. ಮರುದಿನ (ಶನಿವಾರ) ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 3,222 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 1,681 ಸ್ಥಾನಗಳಿಗೆ ಮತ್ತು ದ್ವಿತೀಯ ಹಂತದಲ್ಲಿ 1,541 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News