ನೈರುತ್ಯ ರೈಲ್ವೆ: ರೈಲುಸೇವೆಯ ವೇಳಾಪಟ್ಟಿ ಪರಿಷ್ಕರಣೆ

Update: 2020-12-08 17:59 GMT

ಮಂಗಳೂರು, ಡಿ.8: ಭಾರತೀಯ ನೈರುತ್ಯ ರೈಲ್ವೆ ವಲಯದಲ್ಲಿ ನಿಯಮಿತ ವಿಶೇಷ ರೈಲುಗಳು ಮತ್ತು ಹಬ್ಬದ ವಿಶೇಷ ರೈಲುಗಳು ಆರಂಭಗೊಂಡ ಬಳಿಕ ಪರಿಚಾಲನಾ ಕಾರಣಕ್ಕೆ ಬಹಳಷ್ಟು ಪ್ರಯಾಣಿಕ ರೈಲು ಸೇವೆಗಳ ವೇಳಾಪಟ್ಟಿ ಪರಿಷ್ಕರಿಸಿದೆ.

ನೈರುತ್ಯ ರೈಲ್ವೆಯಿಂದ ಆರಂಭಗೊಳ್ಳುವ/ ನೈರುತ್ಯ ರೈಲ್ವೆಯಲ್ಲಿ ಅಂತ್ಯಗೊಳ್ಳುವ ರೈಲುಗಳು ಮತ್ತು ನೈರುತ್ಯ ರೈಲ್ವೆಯ ವಲಯದ ಮೂಲಕ ಸಾಗುವ ಹಲವು ರೈಲುಗಳ ಸಮಯದಲ್ಲಿ ಪರಿಷ್ಕರಣೆ ಮಾಡಲಾಗಿದೆ. ರೈಲುಗಳು ನಿಲ್ದಾಣದಿಂದ ಹೊರಡುವ ಸಮಯ, ಮಾರ್ಗದಲ್ಲಿನ ನಿಲ್ದಾಣ ಗಳನ್ನು ತಲುಪುವ ಸಮಯ, ಅಂತಿಮ ನಿಲ್ದಾಣಕ್ಕೆ ಆಗಮಿಸುವ ಸಮಯದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

ರೈಲು ಪ್ರಯಾಣಿಕರು ತಮ್ಮ ಪ್ರಯಾಣದ ಆರಂಭಕ್ಕೆ ಸಾಕಷ್ಟು ಸಮಯ ಮೊದಲೇ ತಾವು ಪ್ರಯಾಣ ಮಾಡಲಿರುವ ರೈಲಿನ ಪರಿಷ್ಕೃತ ಸಮಯವನ್ನು ಏಕೀಕೃತ ವಿಚಾರಣಾ ದೂ.ಸಂ.: 139 ಅಥವಾ ನ್ಯಾಷನಲ್ ಟ್ರೈನ್ ಎನ್‌ಕ್ವೈರಿ ಸಿಸ್ಟಮ್ ವೆಬ್‌ಸೈಟ್ ಅಥವಾ ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಹತ್ತಿರದ ಆರಕ್ಷಣಾ ಕೌಂಟರ್/ರೈಲು ನಿಲ್ದಾಣಗಳಲ್ಲಿರುವ ಅಧಿಕೃತ ವ್ಯಕ್ತಿಗಳ ಬಳಿ ವಿಚಾರಿಸಿ ಪರಿಶೀಲಿಸಿಕೊಳ್ಳಬಹುದು.

ವಿಶೇಷ ರೈಲುಗಳಲ್ಲಿ ಸಂಚರಿಸುವ ಎಲ್ಲ ಪ್ರಯಾಣಿಕರು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾಲಕಾಲಕ್ಕೆ ಸೂಚಿಸಿರುವ ಆರೋಗ್ಯಕ್ಕೆ ಸಂಬಂಧಿಸಿದ ನಿಯಮಾವಳಿಗಳಾದ ಮಾಸ್ಕ್ ಧರಿಸುವುದು, ಹ್ಯಾಂಡ್ ಸ್ಯಾನಿಟೈಸರ್ ಬಳಕೆ, ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಮೊದಲಾದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿತಕ್ಕದ್ದು.

ರೈಲಿನ ಸಮಯ ಬದಲಾವಣೆ/ ರೈಲು ತಡವಾಗಿ ಚಲಿಸುತ್ತಿರುವುದು ಸಹಿತ ಮತ್ತಿತರ ಮಾಹಿತಿ ಪಡೆದುಕೊಳ್ಳಲು ರೈಲು ಬಳಕೆದಾರರು ಆರಕ್ಷಣಾ ಟಿಕೆಟ್‌ಗಳನ್ನು ಬುಕ್ ಮಾಡುವಾಗ ಪ್ರಯಾಣ ಮಾಡುವ ವ್ಯಕ್ತಿಗಳ ದೂರವಾಣಿ ಸಂಖ್ಯೆಯನ್ನು ನೀಡಬೇಕು. ಆರೋಗ್ಯಕ್ಕೆ ಸಂಬಂಧಿ ಸಿದ ಸಲಹೆ/ಸೂಚನೆಗಳನ್ನು ಐಆರ್‌ಸಿಟಿಸಿ (www.irctc.co.in) ಅಥವಾ ಸಂಬಂಧಪಟ್ಟ ರಾಜ್ಯ ಸರಕಾರಗಳ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ನೈರುತ್ಯ ರೈಲ್ವೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News