ಡಿ.12ರಂದು ಡಿಡಿಪಿಐ ಬರೆದ ಮೂರು ಪುಸ್ತಕಗಳ ಬಿಡುಗಡೆ

Update: 2020-12-09 14:08 GMT

ಉಡುಪಿ, ಡಿ.9: ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಚ್.ನಾಗೂರ ಬರೆದಿರುವ ಮೂರು ಪುಸ್ತಕಗಳ ಲೋಕಾ ರ್ಪಣೆ ಸಮಾರಂಭವು ಡಿ.12ರಂದು ಅಪರಾಹ್ನ 3ಗಂಟೆಗೆ ಉಡುಪಿ ಬಡಗ ಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ನಡೆಯಲಿದೆ.

ಶೈಕ್ಷಣಿಕ ಲೇಖನಗಳ ಸಂಕಲನ ‘ಶಿಕ್ಷಣ ಸಿರಿ’ ಪುಸ್ತಕವನ್ನು ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್, ಶೈಕ್ಷಣಿಕ ಕವನ ಸಂಕಲನ ‘ಅಕ್ಷರ ಅಂಬಾರಿ’ ಪುಸ್ತಕವನ್ನು ಅಖಿಲ ಭಾರತ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಸುರೇಂದ್ರನಾಥ ಶೆಟ್ಟಿ, ಪುರಾತನ ಶರಣ ಬಾವೂರ ಬೊಮ್ಮಯ್ಯ ಪುಸ್ತಕವನ್ನು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಓ.ಆರ್.ಪ್ರಕಾಶ್ ಬಿಡುಗಡೆಗೊಳಿಸಿ ಅವಲೋಕನ ಮಾಡಲಿರು ವರು ಎಂದು ಎನ್.ಎಚ್.ನಾಗೂ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಕಾರ್ಯಕ್ರಮವನ್ನು ಬಡಗಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಲಿರುವರು. ಅತಿಥಿಗಳಾಗಿ ಡಯಟ್ ಪ್ರಾಚಾರ್ಯ ವೇದಮೂರ್ತಿ, ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕ ಶಂಕರ ಖಾರ್ವಿ, ಶೇಷಶಯನ ಕಾರಿಂಜ, ಕಸಾಪ ಕಾರ್ಕಳ ತಾಲೂಕು ಅಧ್ಯಕ್ಷ ಪ್ರಭಾಕರ ಶೆಟ್ಟಿ ಭಾಗವಹಿಸಲಿರು ವರು ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News