ಮುರ್ಡೇಶ್ವರ ಲಯನ್ಸ್ ಕ್ಲಬ್‍ಗೆ “ಎಕ್ಸಲೆಂಟ್‍ ಕ್ಲಬ್” ಪ್ರಶಸ್ತಿ

Update: 2020-12-09 16:34 GMT

ಭಟ್ಕಳ : ರಾಮದಾಸ ಶೇಟ್ ನೇತೃತ್ವದ ಮುರ್ಡೇಶ್ವರ ಲಯನ್ಸ್ ಕ್ಲಬ್ 2019-2020ನೇ ಲಯನ್ ವರ್ಷದ ತನ್ನ ಕಾರ್ಯಚಟುವಟಿಕೆಗಳಿಗಾಗಿ ಕರ್ನಾಟಕ ಹಾಗೂ ಗೋವಾ ರಾಜ್ಯಗಳನ್ನೊಳಗೊಂಡ 105 ಲಯನ್ಸ್ ಕ್ಲಬ್‍ಗಳಲ್ಲಿ 317ಬಿ ಲಯನ್ ಜಿಲ್ಲೆಗಳ “ಎಕ್ಸಲೆಂಟ್‍ ಕ್ಲಬ್ (ಸಿಲ್ವರ್)” ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಅತಿ ಹೆಚ್ಚು ಕಣ್ಣಿನ ತಪಾಸಣೆ ಶಿಬಿರಗಳನ್ನು ಆಯೋಜಿಸಿದ್ದರಿಂದಾಗಿ ವಿಶೇಷ ಅವಾರ್ಡನ್ನೂ ಪಡೆದುಕೊಂಡಿರುವ ಈ ಕ್ಲಬ್‍ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕ್ಲಬ್‍ನ ಕಾರ್ಯದರ್ಶಿ ನಾಗೇಶ ಮಡಿವಾಳ “ಔಟ್‍ ಸ್ಟ್ಯಾಂಡಿಗ್ ಸೆಕ್ರೆಟರಿ(ಗೋಲ್ಡ್)” ಪ್ರಶಸ್ತಿಯನ್ನು ಪಡೆದುಕೊಂಡಿದ್ದು ಇದು ಇವರಿಗೆ ಸತತ ಎರಡನೇ ವರ್ಷ ಸಿಕ್ಕ ಪ್ರಶಸ್ತಿಯಾಗಿದೆ. ಕ್ಲಬ್‍ನ ಝೋನ್ ಚೆರ್ ಪರ್ಸನ್ ಎಮ್.ವಿ ಹೆಗಡೆಯವರಿಗೆ “ಎಕ್ಸಲೆಂಟ್‍ ಝೋನ್‍ ಚೇರ್‍ಪರ್ಸನ್ (ಸಿಲ್ವರ್) ಪ್ರಶಸ್ತಿ ಲಭಿಸಿದೆ.

ಈ ಪ್ರಶಸ್ತಿಗಳನ್ನು ಇತ್ತೀಚೆಗೆ ಗೋವಾದಲ್ಲಿ ನಡೆದ ಲಯನ್ ಜಿಲ್ಲೆಗಳ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಹಿಂದಿನ ಜಿಲ್ಲಾ ಲಯನ್‍ ಗವರ್ನರ್‍ ಆದ ಶಶಿಂದ್ರನ್ ನಾಯರ್ ವಿತರಿಸಿದರು.

ಈ ವೇಳೆ ಲಯನ್‍ ಗವರ್ನರ್ ಡಾ..ಗಿರೀಶ ಕುಚಿನಾಡ್, ಲಯನ್ ಪ್ರಮುಖರಾದ ರವಿ ಹೆಗಡೆ ಹೂವಿನ ಮನೆ, ಶ್ರೀಕಾಂತ ಮೋರೆ, ಸುಗುಲಾ ಯಲ್ಲಮಲಿ ಮೊದಲಾದವರು ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News