ವಿವಿಧೆಡೆ ಅಕ್ರಮ ಮದ್ಯ ಸಾಗಾಟ, ಆರೋಪಿಗಳ ವಶ

Update: 2020-12-10 15:16 GMT

ಉಡುಪಿ, ಡಿ.10: ಉಡುಪಿ ಅಬಕಾರಿ ಉಪ ಆಯುಕ್ತಕ ಕಚೇರಿಯ ಅಬಕಾರಿ ಉಪನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಎರಡು ದಿನಗಳಿಂದ ಖಚಿತ ಮಾಹಿತಿಯಂತೆ ಜಿಲ್ಲೆಯ ವಿವಿದೆಡೆ ದಾಸ್ತಾನು ಇರಿಸಿದ್ದ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಉಡುಪಿ ತಾಲೂಕು ಬೈರಂಪಳ್ಳಿ ಗ್ರಾಮದ ಕುಂತಾಲಕಟ್ಟೆ ಎಂಬಲ್ಲಿ ಅಕ್ರಮ ವಾಗಿ ದಾಸ್ತಾನು ಇರಿಸಿದ್ದ 64.800 ಲೀ.ಮದ್ಯವನ್ನು ಮಂಗಳವಾರ ಪತ್ತೆ ಹಚ್ಚಿ ಮದ್ಯವನ್ನು ವಶಪಡಿಸಿಕೊಂಡಿದ್ದು, ಪೆರ್ಡೂರು ಗ್ರಾಮದ, ಶಿಲಾವನ ಜೋಗಿ ಬೆಟ್ಟುವಿನ ಮಂಜುನಾಥ ಕುಂದರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಉಡುಪಿ ವಲಯ-2 ರ ಅಬಕಾರಿ ನಿರೀಕ್ಷಕರು, ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು ಬುಧವಾರ ಬ್ರಹ್ಮಾವರ ತಾಲೂಕು ಸಾಬ್ರಕಟ್ಟೆಯಿಂದ ಶಿರೂರು ಮೂರುಕೈಗೆ ಹೋಗುವ ರಸ್ತೆಯ ಬನ್ನೇರಳು ಕಟ್ಟೆ ಎಂಬಲ್ಲಿ ಬ್ರಹ್ಮಾವರದ ಹೆಗ್ಗುಂಜೆ ಗ್ರಾಮದ ಪ್ರಸನ್ನ ಎಂಬವರು ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ 6.480 ಲೀ ಮದ್ಯವನ್ನು ಸಾಗಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ, ವಾಹನ ಹಾಗೂ ಮದ್ಯವನ್ನು ವಶಪಡಿಸಿಕೊಂಡು ಆರೋಪಿ ಯನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News