ಡಿ.12: ಮಂಗಳೂರಿನ ವಿವಿಧೆಡೆ ವಿದ್ಯುತ್ ನಿಲುಗಡೆ

Update: 2020-12-10 17:26 GMT

ಮಂಗಳೂರು, ಡಿ.10: ಅತ್ತಾವರ ಉಪಕೇಂದ್ರದಿಂದ ಹೊರಡುವ 11ಕೆ.ವಿ. ಮುತ್ತಪ್ಪ ಟೆಂಪಲ್ ಫೀಡರ್‌ನಲ್ಲಿ ಜಂಪರ್ ಬದಲಾವಣೆ, ಜಿಒಎಸ್ ದುರಸ್ತಿ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಡಿ.12ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ.

ಪೊಲೀಸ್ ಲೇನ್, ಪಿಡಬ್ಲೂಡಿ, ವಾಣಿಜ್ಯ ತೆರಿಗೆ, ಅಗ್ನಿಶಾಮಕ ಸೇವಾಕೇಂದ್ರ, ಕೇರಳ ಸಮಾಜ ಶಾಲೆ, ಓಲ್ಡ್ ಕೆಂಟ್ ರಸ್ತೆ, ಎಂ.ವಿ ಶೆಟ್ಟಿ ಆಸ್ಪತ್ರೆ, ದೂಮಪ್ಪ ಕಂಪೌಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.

ಮಣ್ಣಗುಡ್ಡ: ಡಿ.12ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮಂಗಳೂರು ನಗರದ ಮಣ್ಣಗುಡ್ಡ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಲಾಲ್‌ಬಾಗ್ ಫೀಡರ್‌ನಲ್ಲಿ ದುರಸ್ತಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಇದರಿಂದ ಮಣ್ಣಗುಡ್ಡ, ಲಾಲ್‌ಬಾಗ್, ಹಿಂದಿ ಪ್ರಚಾರ ಸಮಿತಿ ಸುತ್ತಮುತ್ತ, ಲೇಡಿಹಿಲ್ ಸರ್ಕಲ್, ಚಿಲಿಂಬಿ, ಮಲರಾಯ ದ್ವಾರ, ಲೇಡಿಹಿಲ್ ಚರ್ಚ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News