ವರ್ಷ ಕಳೆದರೂ ಕಾನೂನು ಕ್ರಮ ಜರಗಿಸದ ಸರಕಾರ: ನೇಮಿರಾಜ ರೈ ಆರೋಪ

Update: 2020-12-11 14:46 GMT

ಉಡುಪಿ, ಡಿ.11: ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮ ಪಂಚಾಯತ್‌ನಲ್ಲಿ ಸುಮಾರು ಎರಡೂವರೆ ಕೋಟಿ ರೂ. ಮೊತ್ತದ ಅವ್ಯವಹಾರ ನಡೆದಿದೆ ಎಂಬುದಾಗಿ ಉಡುಪಿ ಸ್ಥಳೀಯ ಲೆಕ್ಕಪರಿಶೋಧನಾ ವರ್ತುಲ ತನಿಖೆ ನಡೆಸಿ ವರದಿ ನೀಡಿದೆ ಎಂದು ಸಾಮಾಜಿಕ ಕಾರ್ಯಕರ್ತ ಬೆಳ್ಳಿಪಾಡಿ ನೇಮಿರಾಜ ರೈ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರದಿ ನೀಡಿ ಸುಮಾರು ಒಂದು ವರ್ಷ ಕಳೆದರೂ ಸರಕಾರ ಅಥವಾ ಅಧಿ ಕಾರಿಗಳು ಯಾವುದೇ ಕಾನೂನು ಕ್ರಮಗಳನ್ನು ತೆಗೆದುಕೊಂಡಿಲ್ಲ. ನಿಟ್ಟೆ ಗ್ರಾಮದ ವರಾಗಿರುವ ಕಾರ್ಕಳ ಶಾಸಕ ಸುನೀಲ್ ಕುಮಾರ್ ಕೂಡ ಈ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ ಎಂದು ದೂರಿದರು.

ಈ ಗ್ರಾಪಂನ 2017-18ರಿಂದ 2018-19ನೆ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿ ಸಾಕಷ್ಟು ಪ್ರಮುಖ ನ್ಯೂನತೆಗಳು ಕಂಡುಬಂದಿವೆ. ಆಯವ್ಯಯದ ಅವಕಾಶಕ್ಕಿಂತ ಹೆಚ್ಚು ವೆಚ್ಚ ಭರಿಸಿರುವುದು, ರಶೀದಿ ಪುಸ್ತಕಗಳ ಉಪಯೋಗ ದಲ್ಲಿ ನ್ಯೂನತೆ, ಸೆಸ್ ಪಾವತಿ ಬಗ್ಗೆ ಖರ್ಚು ಪಾವತಿಗೆ ವಿವರ ನೀಡದಿರುವುದು, ನಗದು ಪುಸ್ತಕದಲ್ಲಿ ವಿವರ ಇಲ್ಲದ ಖರ್ಚು ದಾಖಲಿಸಿರುವುದು, ಸಂಖ್ಯೆ ಇಲ್ಲದ ರಶಿೀದಿ ಬಳಸಿ ಪರವಾನಿಗೆ ನೀಡಿರುವುದು. ಸಿಬ್ಬಂದಿಗೆ ಹೆಚ್ಚುವರಿ ವೇತನ ಪಾವತಿ ಮಾಡಿರುವುದು, ವಾಹನ ಖರೀದಿಯಲ್ಲಿ ನ್ಯೂನತೆ ಎಸಗಿರುವ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ ಎಂದರು.

ಈ ರೀತಿಯ ಅವ್ಯವಹಾರ ಕೇವಲ ಈ ವರ್ಷ ಮಾತ್ರವಲ್ಲ ಕೆಲವು ವರ್ಷಗಳ ಹಿಂದಿನಿಂದಲೂ ನಡೆಯುತ್ತ ಬರುತ್ತಿವೆ. ಈ ಅವ್ಯವಹಾರವು ಪ್ರತಿಯೊಂದು ಹಂತದ ಅಧಿಕಾರಿಗಳಿಗೂ ಗೊತ್ತಿದೆ. ಆದರೂ ಯಾರು ಕೂಡ ಪಂಚಾಯತ್ ರಾಜ್ ಕಾಯಿದೆ ಯನ್ನು ಪಾಲಿಸುತ್ತಿಲ್ಲ. ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಜರಗಿಸುತ್ತಿಲ್ಲ ಎಂದು ಅವರು ಆರೋಪಿಸಿದರು.

ಈ ಅವ್ಯವಹಾರದ ಬಗ್ಗೆ ಮಾತನಾಡದ ಬಿಜೆಪಿಯವರು ಗ್ರಾಪಂ ಚುನಾ ವಣೆಗಾಗಿ ಗ್ರಾಮ ಸ್ವರಾಜ್ಯ ಸಮಾವೇಶಗಳನ್ನು ಮಾಡುತ್ತಿದ್ದಾರೆ. ಆದರೆ ಇದು ಇವರ ಗ್ರಾಮ ಸ್ವರಾಜ್ಯ ಅಲ್ಲ, ಗ್ರಾಮದ ನಾಶ. ಈ ಅವ್ಯವಹಾರದಲ್ಲಿ ಭಾಗಿ ಯಾದವರೇ ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂದು ಅವರು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News