ಉಡುಪಿ: ಕೊರೋನ ವಾರಿಯರ್ಸ್‌ಗೆ ಸನ್ಮಾನ

Update: 2020-12-13 15:10 GMT

ಉಡುಪಿ, ಡಿ.13: ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಉಡುಪಿ ವಿಭಾಗ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಅರ್ಚನಾ ಟ್ರಸ್ಟ್ ಮಣಿಪಾಲ, ಭಾರ್ಗವಿ ಆರ್ಟ್ಸ್ ಮತ್ತು ಡ್ಯಾನ್ಸ್ ಅಕಾಡೆಮಿ ಇವುಗಳ ಸಹಭಾಗಿತ್ವದಲ್ಲಿ ಕೊರೊನಾ ವಾರಿಯರ್ಸ್‌ಗೆ ಸನ್ಮಾನ ಕಾರ್ಯಕ್ರಮ ರವಿವಾರ ಕನ್ನರ್ಪಾಡಿಯ ಶ್ರೀದೇವಿ ಸಭಾಭವನದಲ್ಲಿ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಜೆಪಿ ಉಡುಪಿ, ಕೊಡಗು, ದ.ಕ. ಜಿಲ್ಲೆಯ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಕಿದಿಯೂರು ಮಾತನಾಡಿ, ಹಣಬಲದಿಂದ ಏನೂ ಸಾಧ್ಯವಿಲ್ಲ ಎಂಬುವುದನ್ನು ಕೊರೊನಾ ಕಲಿಸಿಕೊಟ್ಟಿದೆ. ಜೀವನದಲ್ಲಿ ಬದುಕು ಸಾಗಿಸುವುದು ಮುಖ್ಯ. ಸಂದಿಗ್ಧ ಕಾಲದಲ್ಲಿಯೂ ಕೊರೋನ ವಾರಿಯರ್ಸ್‌ಗಳ ಸೇವೆ ದೇವರು ಮೆಚ್ಚುವಂತದ್ದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೊರೋನ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸಿದ ಅರ್ಚನಾ ಎಂ.ಎನ್., ಮೇಘನಾ ರಾವ್, ನಾಗಾರ್ಜುನ ಪೂಜಾರಿ, ಮೇಘಾ, ರೇಷ್ಮಾ ಪೈ, ಜ್ಯೋತಿ ವಿಶ್ವನಾಥ ನಾಯಕ್, ಸತೀಶ್, ರಂಜಿತ್ ಕುಮಾರ್, ಕರ್ವಾಲು ರಾಘವೇಂದ್ರ ಪ್ರಭು ಸೇರಿದಂತೆ ಹಲು ಮಂದಿಯನ್ನು ಸನ್ಮಾನಿಸಲಾಯಿತು.

ರೋಟರಿ ಜಿಲ್ಲಾ ಗವರ್ನರ್ ರಾಜಾರಾಂ ಭಟ್ ಮಾತನಾಡಿದರು. ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿಯ ಸಂಸ್ಥಾಪಕ ಕೊಲ್ಲಾಡಿ ಬಾಲಕೃಷ್ಣ ರೈ, ಉಡುಪಿ ತಾಲೂಕು ಆರೋಗ್ಯ ಅಧಿಕಾರಿ ಡಾ.ನಾಗರತ್ನ, ಕನ್ನರ್ಪಾಡಿಯ ಶ್ರೀದೇವಿ ಸಭಾಭವನದ ವ್ಯವಸ್ಥಾಪಕ ರಮೇಶ್ ಬೀಡು, ಮಹಾಮೈತ್ರಿಯ ಅಧ್ಯಕ್ಷೆ ಪೂರ್ಣಿಮಾ ಶೆಟ್ಟಿ, ಉಡುಪಿಯ ಭಾರ್ಗವಿ ಆಟ್ಸ್ ಮತ್ತು ಡ್ಯಾನ್ಸ್ ಅಕಾಡೆಮಿಯ ಸಂಸ್ಥಾಪಕರಾದ ಶ್ರೀಕಾಂತ ಉಪಾಧ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News