ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ: ಕಾಸರಗೋಡಿನಲ್ಲಿ ಬಿರುಸಿನ ಮತದಾನ

Update: 2020-12-14 05:45 GMT

ಕಾಸರಗೋಡು, ಡಿ.14: ಸ್ಥಳೀಯಾಡಳಿತ ಸಂಸ್ಥೆಗೆ  ಬಿರುಸಿನ ಮತದಾನ ನಡೆಯುತ್ತಿದೆ.

ಮೊದಲ ಗಂಟೆಯಲ್ಲಿ 7 ಶೇಕಡಾ ಮತದಾನವಾಗಿತ್ತು. ಬೆಳಗ್ಗೆ 10:45ರ ತನಕ 25.86 ಶೇಕಡ ಮತದಾನವಾಗಿದೆ. ಬೆಳಗ್ಗೆಯಿಂದಲೇ  ಮತಗಟ್ಟೆಯಲ್ಲಿ ಸರತಿ ಸಾಲು ಕಂಡುಬರುತ್ತಿತ್ತು. ಕೋವಿಡ್  ಮಾನದಂಡದಂತೆ  ಮತದಾನ ಮುಂದುವರಿದಿದೆ.  

ಬೆಳಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನ ಸಂಜೆ 6 ಗಂಟೆ ತನಕ ನಡೆಯಲಿದೆ. 5ರಿಂದ 6ರ ಗಂಟೆ ತನಕ ಕೋವಿಡ್ ಸೋಂಕಿತರಿಗೆ ಮತದಾನ ಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಕಂದಾಯ ಸಚಿವ ಇ.ಚಂದ್ರಶೇಖರನ್ ಪರವನಡ್ಕ ಮೋಡಲ್ ರೆಸಿಡೆನ್ಸಿಯಲ್ ಶಾಲಾ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್  ಪಡನ್ನಕ್ಕಾಡ್ ಎಸ್.ಎನ್.ಎ.ಯು.ಪಿ ಶಾಲಾ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

 ಶಾಸಕ ಎಂ.ರಾಜಗೋಪಾಲ್ ಕಯ್ಯೂರು ಜಿ.ವಿ.ಎಚ್. ಶಾಲಾ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ರವರು ನೆಲ್ಲಿಕುಂಜೆ ಎಯುಪಿ ಶಾಲೆಯ ಒಂದನೇ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಉದುಮ ಶಾಸಕ ಕೆ.ಕುಂಞರಾಮನ್ ಪಳ್ಳಿಕೆರೆ ಜಿ.ಎಲ್.ಪಿ. ಶಾಲೆಯಲ್ಲಿ ಮತದಾನ ಮಾಡಿದರು.

ಜಿಲ್ಲಾ ಪಂಚಾಯತ್ ನ  17  ಡಿವಿಜನ್, 38 ಗ್ರಾಮ ಪಂಚಾಯತ್ ಗಳು, 6 ಬ್ಲಾಕ್ ಪಂಚಾಯತ್ ಮತ್ತು ಮೂರು ನಗರಸಭೆಗಳಿಗೆ ಚುನಾವಣೆ  ನಡೆಯುತ್ತಿದೆ. 1,409 ಮತಗಟ್ಟೆಗಳಲ್ಲಿ  ಮತದಾನ ನಡೆಯುತ್ತಿದೆ. 2,648 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News