ಕಾಸರಗೋಡು ಜಿಲ್ಲೆಯಲ್ಲಿ 12.30ರ ವೇಳೆ ಶೇ. 44.55 ಮತದಾನ

Update: 2020-12-14 07:37 GMT

ಕಾಸರಗೋಡು, ಡಿ.14: ಕಾಸರಗೋಡು ಜಿಲ್ಲೆಯಲ್ಲಿ ಸ್ಥಳೀಯಾಡಳಿತ  ಸಂಸ್ಥೆಗಳಿಗೆ ನಡೆಯುತ್ತಿರುವ ಚುನಾವಣೆ ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಶಾಂತಿಯುತವಾಗಿ ಮುಂದುವರಿದಿದೆ. ಮಧ್ಯಾಹ್ನ 12:30ರ ವೇಳೆಗೆ ಶೇ.44.55 ಮತದಾನವಾಗಿದೆ. ಈ ಅವಧಿಯಲ್ಲಿ ಒಟ್ಟು 4,66,470 ಮಂದಿ ಹಕ್ಕು ಚಲಾವಣೆ ಮಾಡಿದ್ದಾರೆ. ಈ ಪೈಕಿ 2,26,406 ಪುರುಷರು, 2,40,297 ಮಹಿಳಾ ಮತದಾರರು ಸೇರಿದ್ದಾರೆ.

ಜಿಲ್ಲಾ ಪಂಚಾಯತ್ ನ  17  ಡಿವಿಜನ್, 38 ಗ್ರಾಮ ಪಂಚಾಯತ್ ಗಳು, 6 ಬ್ಲಾಕ್ ಪಂಚಾಯತ್ ಮತ್ತು ಮೂರು ನಗರಸಭೆಗಳಿಗೆ ಚುನಾವಣೆ  ನಡೆಯುತ್ತಿದೆ. 1,409 ಮತಗಟ್ಟೆಗಳಲ್ಲಿ  ಮತದಾನ ನಡೆಯುತ್ತಿದೆ. 2,648 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News