ಪುತ್ತೂರು: ಭಾವೈಕ್ಯತೆ ಕವಿಗೋಷ್ಠಿ ಮತ್ತು ಅಕ್ಷರ ಸಂತ ಹಾಜಬ್ಬರಿಗೆ ಬಿರುದು ಪ್ರದಾನ ಕಾರ್ಯಕ್ರಮ

Update: 2020-12-14 16:37 GMT

ಪುತ್ತೂರು: ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ಮತ್ತು ಚಂದನ ಸಾಹಿತ್ಯ ವೇದಿಕೆ ಸುಳ್ಯ ಜಂಟಿ ಆಶ್ರಯದಲ್ಲಿ ಭಾವೈಕ್ಯತಾ ಕವಿಗೋಷ್ಠಿ ಮತ್ತು ಸಜ್ಜನ ಚಂದನ ಸದ್ಬಾವನ ಪ್ರಶಸ್ತಿ ಪ್ರದಾನ ಹಾಗೂ ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ "ಸದ್ಬಾವನಾ ಶೈಕ್ಷಣಿಕ ಹರಿಕಾರ" ಬಿರುದು ಪ್ರದಾನ ಕಾರ್ಯಕ್ರಮವು  ಡಿ.13ರಂದು ಪುತ್ತೂರು ರೋಟರಿ ಟ್ರಸ್ಟ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪದ್ಮಶ್ರೀ ಅಕ್ಷರ ಸಂತ ಹರೇಕಳ ಹಾಜಬ್ಬ ಉದ್ಘಾಟಿಸಿದರು. ಸಮಾರಂಭದ ಸರ್ವಾಧ್ಯಕ್ಷತೆಯನ್ನು ಹಿರಿಯ ಸಾಹಿತಿ ಶ್ರೀ ನಾರಾಯಣ ರೈ ಕುಕ್ಕುವಳ್ಳಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷರಾದ ಝೇವಿಯರ್ ಡಿ'ಸೋಜ, ಪುತ್ತೂರು ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್, ಯುವ ಕವಯಿತ್ರಿ ಪ್ರಜ್ಞಾ ಕುಲಾಲ್, ಚಂದನ ಸಾಹಿತ್ಯ ವೇದಿಕೆ ಉಪಾಧ್ಯಕ್ಷ ಮಂಜುನಾಥ್ ಬಳ್ಳಾರಿ  ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಿತ್ತಳೆ ಹಣ್ಣು ಮಾರಾಟ ಮಾಡಿ ಶಾಲೆ ಕಟ್ಟಿಸಿದ್ದ ಪದ್ಮಶ್ರೀ ಪುರುಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ರವರಿಗೆ ಜಂಟಿ ಸಂಘಗಳ ಸಹಯೋಗದಿಂದ   "ಸದ್ಬಾವನಾ ಶೈಕ್ಷಣಿಕ ಹರಿಕಾರ" ಬಿರುದು ಪ್ರದಾನ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ಪೂವಪ್ಪ ಕಣಿಯೂರು , ಪ್ರೊ.ಡಾ. ಶಿವರಾಂ ಮಂಗಳೂರು, ಹಸೀನಾ, ಶ್ರೀ ನಟರಾಜು  ಬೆಂಗಳೂರು , ಶೀಲಾ ಪಡೀಲ್ ಮಂಗಳೂರು , ಮುಹಮ್ಮದ್ ಸಾಬ್, ಶಾಂತಾ ಕುಂಟಿನಿ ,  ಆಶಾ ಮಯ್ಯ ಪುತ್ತೂರು, ಚಿತ್ತರಂಜನ್ ಬೋಳಾರ್ ಮತ್ತು ನಿರ್ಮಲಾ ಉದಯಕುಮಾರ್ ಅವರಿಗೆ ಸಜ್ಜನ ಚಂದನ ಸದ್ಭಾವನಾ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಚಂದನ ಸಾಹಿತ್ಯ ವೇದಿಕೆ ವತಿಯಿಂದ ಡಾ .ಉಮ್ಮರ್ ಬೀಜದಕಟ್ಟೆಯವರಿಗೆ ಚಂದನ ಸದ್ಭಾವನಾ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು . ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ವತಿಯಿಂದ ಸಾಹಿತಿ ಮತ್ತು ಜ್ಯೋತಿಷಿ ಎಚ್  ಭೀಮರಾವ್ ವಾಷ್ಠರ್ ರವರಿಗೆ ಸಜ್ಜನ ಸದ್ಭಾವನಾ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ನಂತರ ಹಿರಿಯ ಸಾಹಿತಿ ಶ್ರೀ ನಾರಾಯಣ ರೈ ಕುಕ್ಕುವಳ್ಳಿ ರವರ ಅದ್ಯಕ್ಷತೆಯಲ್ಲಿ ನಡೆದ  ಭಾವೈಕ್ಯತಾ ಕವಿಗೋಷ್ಠಿಯಲ್ಲಿ ಒಟ್ಟು 42 ಮಂದಿ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ಕವಿಗೋಷ್ಠಿ ಅಧ್ಯಕ್ಷರಾದ ಶ್ರೀ ನಾರಾಯಣ ಕುಕ್ಕುವಳ್ಳಿಯವರು ತಮ್ಮ ಅಧ್ಯಕ್ಷೀಯ ಮಾತುಗಳನ್ನು ಆಡಿ ಕವಿಗಳಿಗೆ ಪ್ರೋತ್ಸಾಹ , ಸ್ಪೂರ್ತಿ ತುಂಬಿ ಕವನಗಳ ವಿಮರ್ಶೆ ಮಾಡಿದರು.

ಸದ್ಭಾವನಾ ಕವಿಯಾಗಿ ಮೂಡಿಬಂದ ಧನ್ಯಶ್ರೀ  ಅವರಿಗೆ ಸಮ್ಮಾನಿಸಿ ಗೌರವಿಸಲಾಯಿತು. ಬೀಜದಕಟ್ಟೆ ಅಭಿಮಾನಿಗಳ ಬಳಗ ಮತ್ತು ಸಜ್ಜನ ಪ್ರತಿಷ್ಠಾನದ ಸಮವಸ್ತ್ರಗಳನ್ನು ಬಿಡುಗಡೆ ಮಾಡಲಾಯಿತು. ಹಿರಿಯ ಕವಿ ಶ್ರೀ ಹರಿ ನರಸಿಂಹ ಉಪಾಧ್ಯಾಯರ ಭಾವ ಶರಧಿ ಸಾಹಿತ್ಯ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆಯ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ ಪ್ರಾಸ್ತಾವಿಕ ಮಾತನಾಡಿದರು. ಚಂದನ ಸಾಹಿತ್ಯ ವೇದಿಕೆ ಅಧ್ಯಕ್ಷ ಭೀಮರಾವ್ ವಾಷ್ಠರ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಪೂರ್ವ ಕಾರಂತ ಪ್ರಾರ್ಥನೆ ಹಾಡಿದರು. ಸಜ್ಜನ ಪ್ರತಿಷ್ಠಾನ ನಿರ್ದೇಶಕ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿ ಅಶ್ರಫ್ ಪರ್ಪುಂಜ ವಂದಿಸಿದರು.

ಸಜ್ಜನ ಪ್ರತಿಷ್ಠಾನ ನಿರ್ದೇಶಕರಾದ ಶಶಿಕಾಂತ್,ಮಂಜುನಾಥ್,ರಕ್ಷಿತ್, ವಹಾಬ್ ಅಡಿಮಾರಡ್ಕ,ರಹೀಮ್ ಬೀಜದಕಟ್ಟೆ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News