ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ: ಕಾಸರಗೋಡಿನಲ್ಲಿ ಡಿ.16ರಂದು ಮತ ಎಣಿಕೆ

Update: 2020-12-15 08:48 GMT

ಕಾಸರಗೋಡು, ಡಿ.15: ಸೋಮವಾರ ನಡೆದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಡಿ.16ರಂದು  ನಡೆಯಲಿದ್ದು, ರಾಜಕೀಯ ಪಕ್ಷಗಳಲ್ಲಿ ಲೆಕ್ಕಾಚಾರ ಶುರುವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಈ ಫಲಿತಾಂಶ ನಿರ್ಣಾಯಕವಾಗಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಬೆಳಿಗ್ಗೆ 9 ಗಂಟೆಯಿಂದ 9 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. 6 ಬ್ಲಾಕ್ ಗಳ  ಆರು ಕೇಂದ್ರ ಹಾಗೂ ಮೂರು ನಗರ ಸಭೆಯ ಮೂರು ಕೇಂದ್ರಗಳಲ್ಲಿ ಎಣಿಕೆ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಎಲ್ಲಾ ಫಲಿತಾಂಶ ಹೊರ ಬೀಳುವ ನಿರೀಕ್ಷೆ ಇದೆ
38 ಗ್ರಾಮ ಪಂಚಾಯತ್, ಮೂರು ನಗರಸಭೆ, ಆರು ಬ್ಲಾಕ್ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಗೆ ಸೋಮವಾರ ಚುನಾವಣೆ ನಡೆದಿತ್ತು.

ಶೇ.77.24 ಮತದಾನ
ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಶೇ.77.24 ಮತದಾನವಾಗಿದೆ. 
ಜಿಲ್ಲೆಯ ಒಟ್ಟು 10,48,645 ಮಂದಿ ಮತದಾರರ ಪೈಕಿ 8,09,981 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇವರಲ್ಲಿ 3,79,573 ಮಂದಿ ಪುರುಷರು, 4,30,406 ಮಂದಿ ಮಹಿಳೆಯರು, ಇಬ್ಬರು ಲೈಂಗಿಕ ಅಲ್ಪ ಸಂಖ್ಯಾತರು ಮತದಾನ ಮಾಡಿದ್ದಾರೆ.

ನಗರಸಭೆಗಳ ಮಟ್ಟದಲ್ಲಿ ನೀಲೇಶ್ವರದಲ್ಲಿ ಅತ್ಯಧಿಕ ಮತದಾನವಾಗಿದೆ. ಇಲ್ಲಿ ಶೇ.80.38 ಮತ ಚಲಾವಣೆ ಆಗಿದೆ. ಅತಿ ಕಡಿಮೆ ಮತದಾನ  ಕಾಸರಗೋಡು ನಗರಸಭೆಯಲ್ಲಿ ನಡೆದಿದೆ. ಇಲ್ಲಿ ಶೇ.70.3 ಮತದಾನವಾಗಿದೆ.

ಬ್ಲೋಕ್ ಪಂಚಾಯತ್ ಗಳ ಮಟ್ಟದಲ್ಲಿ ಅತ್ಯಧಿಕ ಮತಚಲಾವಣೆ ನೀಲೇಶ್ವರ ಬ್ಲೋಕ್ ಪಂಚಾಯತ್ ನಲ್ಲಿ ನಡೆದಿದೆ. ಇಲ್ಲಿ ಶೇ 82.08 ಮತದಾನವಾಗಿದೆ. ಅತಿ ಕಡಿಮೆ ಕಾಸರಗೋಡು ಬ್ಲೋಕ್ ನಲ್ಲಿ ನಡೆದಿದ್ದು, ಇಲ್ಲಿ ಶೇ.72.9 ಮತ ಚಲಾವಣೆಯಾಗಿದೆ.

 ನಗರಸಭೆಗಳು
ಕಾಸರಗೋಡು- 70.3 %
ಕಾಞಂಗಾಡ್-  78.94 %
ನೀಲೇಶ್ವರ-   80.38 %
 
ಬ್ಲೋಕ್ ಪಂಚಾಯತ್ ಗಳು
ಕಾರಡ್ಕ- 81.35 %
ಮಂಜೇಶ್ವರ- 73.63 %
ಕಾಸರಗೋಡು- 72.9 %
ಕಾಞಂಗಾಡ್-  77.35 %  
ಪರಪ್ಪ- 80.75 %
ನೀಲೇಶ್ವರ- 82.43 %

   ಪಂಚಾಯತ್ ಗಳು
1. ಉದುಮ-  73.94 %
2. ಪಳ್ಳಿಕ್ಕರೆ- 72.62 %
3.ಅಜಾನೂರು- 76.95 %
4. ಪುಲ್ಲೂರು-ಪೆರಿಯ- 82.23 %
5. ಮಡಿಕೈ- 87.43 %
6. ಕುಂಬ್ಡಾಜೆ- 76.15 %
7. ಬೆಳ್ಳೂರು- 85.86 %
8. ಕಾರಡ್ಕ- 80.3 %
9. ಮುಳಿಯಾರು- 77.79 %
10. ದೇಲಂಪಾಡಿ- 81.07 %
11. ಬೇಡಡ್ಕ- 82.19 %
12.ಕುತ್ತಿಕೋಲು-  86.51 %
13. ಕಯ್ಯೂರು-ಚೀಮೇನಿ-  86.16 %
14. ಚೆರುವತ್ತೂರು-  81.53 %
15. ವಲಿಯಪರಂಬ- 85.45 %
16. ಪಡನ್ನ- 80.31 %
17.ಪಿಲಿಕೋಡ್- 88.33 %
18.ತ್ರಿಕರಿಪುರ- 75.68 %
19. ಕೋಡೋಂ-ಬೇಳೂರು- 78.1 %  
20. ಕಳ್ಳಾರ್- 80.48 %
21. ಪನತ್ತಡಿ- 82.21 %
22. ಬಳಾಲ್- 79.87 %
23. ಕಿನಾನೂರು-ಕರಿಂದಳಂ- 84.42 %  
24. ವೆಸ್ಟ್ ಏಳೇರಿ- 81.58 %
25. ಈಸ್ಟ್ ಏಳೇರಿ-  79.87 %
26. ಮಂಜೇಶ್ವರ-  69.3 %
27. ವರ್ಕಾಡಿ- 77.56 %
28. ಮೀಂಜ-  77.29 %
29. ಮಂಗಲ್ಪಾಡಿ- 67.55 %
30. ಪೈವಳಿಕೆ- 76.68 %
31. ಪುತ್ತಿಗೆ-  75.95 %
32. ಎಣ್ಮಕಜೆ-  78.95 %
33. ಕುಂಬಳೆ-  70.73 %
34. ಬದಿಯಡ್ಕ- 71.91 %
35. ಮೊಗ್ರಾಲ್ ಪುತ್ತೂರು- 74.83 %  
36. ಮಧೂರು- 72.01 %
37. ಚೆಮ್ನಾಡ್-  74.15 %
38. ಚೆಂಗಳ-  74.04%

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News