ಮರಳು ಸಮಸ್ಯೆ ನಿವಾರಿಸಲು ದ.ಕ. ಜಿಲ್ಲಾ ಕಾಂಗ್ರೆಸ್‌ನಿಂದ ಜಿಲ್ಲಾಧಿಕಾರಿಗೆ ಮನವಿ

Update: 2020-12-15 09:24 GMT

ಮಂಗಳೂರು, ಡಿ.15: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಆರ್‌ಝೆಡ್ ಮತ್ತು ಸಿಆರ್‌ಝೆಡೇತರ ಮರಳು ವಿತರಣೆಯಲ್ಲಿ ಸುಧಾರಣೆ ಹಾಗೂ ಹೊರರಾಜ್ಯಗಳಿಗೆ ಹೋಗುವ ಮರಳನ್ನು ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದ.ಕ. ಜಿಲ್ಲಾ ಕಾಂಗ್ರೆಸ್‌ನ ನಿಯೋಗ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಶಾಸಕರಾದ ಯು.ಟಿ.ಖಾದರ್, ಹರೀಶ್ ಕುಮಾರ್, ಮಾಜಿ ಶಾಸಕ ಐವನ್ ಡಿಸೋಜ, ಮುಖಂಡರಾದ ವಿಶ್ವಾಸ್ ದಾಸ್, ಪ್ರವೀಣ್‌ಚಂದ್ರ ಆಳ್ವ, ಗಿರೀಶ್ ಶೆಟ್ಟಿ, ಪ್ರಕಾಶ್ ಸಾಲ್ಯಾನ್ ನೇತೃತ್ವದಲ್ಲಿ ನಿಯೋಗವು ಜಿಲ್ಲಾಧಿಕಾರಿ ಭೇಟಿ ಮಾಡಿ, ಮನವಿ ಸಲ್ಲಿಸಲಾಯಿತು.

ಡಿ.24 ಮತ್ತು 25ರಂದು ಕ್ರಿಸ್ಮಸ್ ಆಚರಣೆಯ ಸಂದರ್ಭದಲ್ಲಿ ಕ್ರೈಸ್ತರು ಚರ್ಚ್‌ಗಳಲ್ಲಿ ಪೂಜೆಯಲ್ಲಿ ಭಾಗಗೊಳ್ಳುವ ಸಲುವಾಗಿ ಕೋವಿಡ್-19 ನಿಯಮದಲ್ಲಿ ಸಡಿಲಿಕೆ ನೀಡಿ, ಸುರಕ್ಷಿತ ಅಂತರ ಕಾಪಾಡುವಲ್ಲಿ ಆದೇಶ ಹೊರಡಿಸಬೇಕೆಂದು ಜಿಲ್ಲಾಧಿಕಾರಿಯನ್ನು ಇದೇ ಸಂದರ್ಭ ಒತ್ತಾಯಿಸಲಾಯಿತು.

ನಗರದಲ್ಲಿ ಸಿಸಿಟಿವಿ ಕ್ಯಾಮರಾಗಳು ನಿರುಪಯುಕ್ತವಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ, ಮಂಗಳೂರು-ಗುಂಡ್ಯ ರಸ್ತೆ ಹಾಗೂ ಮಂಗಳೂರು-ಸಂಪಾಜೆ ರಸ್ತೆಯು ತೀರಾ ಹದೆಗೆಟ್ಟಿದ್ದು, ಸಂಚಾರ ಮಾಡಲು ಕಷ್ಟವಾಗುವುದರಿಂದ ಇದನ್ನು ಕೂಡಲೇ ದುರಸ್ತಿ ಮಾಡುವಂತೆಯೂ ಜಿಲ್ಲಾಧಿಕಾರಿಯನ್ನು ನಿಯೋಗ ಆಗ್ರಹಿಸಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News