ಗ್ರಾಪಂ ಚುನಾವಣೆಯಲ್ಲಿ ಜನಪರ ಅಭ್ಯರ್ಥಿಗಳ ಆಯ್ಕೆ ಮಾಡಿ: ಸೊರಕೆ

Update: 2020-12-15 12:26 GMT

ಉದ್ಯಾವರ, ಡಿ.15: ಪ್ರಜಾಪ್ರಭುತ್ವ ವ್ಯವಸ್ಥೆಯ ತಳಪಾಯ ಇರೋದೆ ಗ್ರಾಮಪಂಚಾಯತ್‌ಗಳಲ್ಲಿ. ದೇಶದ ಪ್ರಜಾಪ್ರಭುತ್ವ ಯಶಸ್ವಿ ಯಾಗಬೇಕಾದರೆ ಗ್ರಾಪಂಗೆ ದೂರದೃಷ್ಠಿ ಇರುವ, ಅಭಿವೃದ್ಧಿಯ ಬಗ್ಗೆ ಕಲ್ಪನೆ ಇರುವ ಸಮರ್ಥ ಜನಪರ ಅಭ್ಯರ್ಥಿಗಳನ್ನು ಆಯ್ಕೆ ಮಾಡ ಬೇಕಾಗಿದೆಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.

ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ಸಭೆಯನ್ನು ದ್ದೇಶಿಸಿ ಅವರು ಮಾತನಾಡುತಿದ್ದರು. ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಜನತೆಯ ಮೇಲಿದೆ. ಆ ಜವಾಬ್ದಾರಿಯನ್ನು ಜನತೆ ಸಮರ್ಥವಾಗಿ ನಿಭಾಯಿಸಬೇಕಾಗಿದೆ ಎಂದರು.

ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ದಕ್ಕೆ ಬಾರದಂತೆ ಕಾಪಾಡುವ ಕರ್ತವ್ಯ ನಮ್ಮೆಲ್ಲರ ಮೇಲಿದೆ. ಅದನ್ನು ನಾವು ಸಮರ್ಥವಾಗಿ ನಿಭಾಯಿ ಸೋಣ. ಇಂದು ನಮ್ಮನ್ನಾಳುವ ಸರಕಾರಗಳು ಎಲ್ಲಾರಂಗದಲ್ಲಿ ವಿಫಲವಾಗಿದೆ. ಸರಕಾರ ತಂದಿರುವ ರೈತ ಸುಧಾರಣ ಮಸೂದೆ, ಎಪಿಎಂಸಿ ಕಾಯಿದೆಗಳೆಲ್ಲವೂ ಜನ ವಿರೋಧಿ ಕಾಯಿದೆಗಳಾಗಿವೆ. ಈ ಮಸೂದೆಗಳನ್ನು ಜನತೆ ದಿಕ್ಕರಿಸ ಬೇಕಾಗಿದೆ ಎಂದು ಸೊರಕೆ ನುಡಿದರು.

ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕೊರಂಗ್ರಪಾಡಿ ಮಾತನಾಡಿದರು. ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳನ್ನು ಸ್ವಾಗತಿಸಿದ ರಮೇಶ್ ಕಾಂಚನ್ ಕಾರ್ಯಕ್ರಮ ನಿರೂಪಿಸಿ ದರು. ಪ್ರಧಾನ ಕಾರ್ಯದರ್ಶಿ ರೋಯ್ಸಾ ಮರ್ವಿನ್ ಫೆರ್ನಾಂಡಿಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News