ಉಡುಪಿ ಜಿ.ಗ್ರಾ.ಪಂ ಚುನಾವಣೆ ಮೊದಲ ಹಂತ: 63 ಮಂದಿ ಅವಿರೋಧ ಆಯ್ಕೆ, 1047 ಸ್ಥಾನಕ್ಕೆ 2349 ಅಭ್ಯರ್ಥಿಗಳು

Update: 2020-12-15 15:51 GMT

ಉಡುಪಿ, ಡಿ.13: ಜಿಲ್ಲೆಯ ಉಡುಪಿ, ಹೆಬ್ರಿ, ಬೈಂದೂರು, ಬ್ರಹ್ಮಾವರ ತಾಲೂಕುಗಳ 67 ಗ್ರಾಪಂಗಳ ಒಟ್ಟು 1122 ಸ್ಥಾನಗಳಿಗೆ ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಾ ಕಣ ಸ್ಪಷ್ಟಗೊಂಡಿದ್ದು, ಒಟ್ಟು 63 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಡಿ.22ರಂದು ನಡೆಯುವ ಚುನಾವಣೆಯಲ್ಲಿ 1047 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಒಟ್ಟು 2349 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿ ಉಳಿದುಕೊಂಡಿದ್ದಾರೆ.

ಬ್ರಹ್ಮಾವರ ತಾಲೂಕು ಕೋಡಿ ಗ್ರಾಪಂನಲ್ಲಿ ವಿವಿಧ ಕಾರಣಗಳಿಗಾಗಿ ಚುನಾವಣೆಯನ್ನು ಬಹಿಷ್ಕರಿಸುವ ಗ್ರಾಮಸ್ಥರ ಒಗ್ಗಟ್ಟಿನ ತೀರ್ಮಾನದಂತೆ ಈ ಗ್ರಾಪಂನ 12 ಸ್ಥಾನಗಳಿಗೆ ಯಾವೊಬ್ಬ ಅಭ್ಯರ್ಥಿಯೂ ಸ್ಪರ್ಧಾಕಣದಲ್ಲಿ ಉಳಿದುಕೊಂಡಿಲ್ಲ. ನಾಮಪತ್ರ ಸಲ್ಲಿಕೆಯ ಕೊನೆಯ ದಿನದಂದು ಮೂವರು ನಾಮಪತ್ರ ಸಲ್ಲಿಸಿದ್ದರೂ ಗ್ರಾಮಸ್ಥರ ಒತ್ತಾಸೆಯಂತೆ ಅವರು ನಾಮಪತ್ರ ಹಿಂದೆಗೆತದ ಕೊನೆಯ ದಿನವಾದ ಸೋಮವಾರ ತಮ್ಮ ನಾಮಪತ್ರಗಳನ್ನು ಹಿಂದೆಗೆದುಕೊಂಡರು. ಅಲ್ಲಿಗೆ ಕೋಡಿ ಗ್ರಾಪಂನಲ್ಲಿ ಈ ಬಾರಿ ಚುನಾವಣೆಯೇ ನಡೆಯದಂತಾಗಿದೆ.

ನಾಲ್ಕು ತಾಲೂಕುಗಳಲ್ಲಿ ಒಟ್ಟು 63 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರಲ್ಲಿ ಉಡುಪಿ ತಾಲೂಕಿನ 9 ಮಂದಿ, ಹೆಬ್ರಿ ತಾಲೂಕಿನ 7 ಮಂದಿ, ಬೈಂದೂರು ತಾಲೂಕಿನ 8 ಮಂದಿ ಹಾಗೂ ಬ್ರಹ್ಮಾವರ ತಾಲೂಕಿನ 39 ಮಂದಿ ಸೇರಿದ್ದಾರೆ.

ಹೀಗಾಗಿ ಉಳಿದ 1047 ಸ್ಥಾನಗಳಿಗೆ ಮಾತ್ರ ಡಿ.22ರಂದು ಮತದಾನ ನಡೆಯಬೇಕಾಗಿದೆ. ಇವುಗಳಿಗೆ 1241 ಪುರುಷರು ಹಾಗೂ 1108 ಮಹಿಳೆಯರು ಸೇರಿದಂತೆ ಒಟ್ಟು 2349 ಮಂದಿ ಸ್ಪರ್ಧೆಯಲ್ಲಿ ಉಳಿದು ಕೊಂಡಿದ್ದಾರೆ.

ಉಡುಪಿ ತಾಲೂಕಿನ 16 ಗ್ರಾಪಂಗಳ ಉಳಿದ 320 ಸ್ಥಾನಗಳಿಗೆ ಒಟ್ಟು 684 ಮಂದಿ (351ಪುರುಷರು+333ಮಹಿಳೆಯರು) ಸ್ಪರ್ಧಿಸಿದ್ದರೆ, ಹೆಬ್ರಿ ತಾಲೂಕಿನ 9 ಗ್ರಾಪಂಗಳ 115 ಸ್ಥಾನಗಳಿಗೆ 255 (131+124) ಮಂದಿ, ಬೈಂದೂರು ತಾಲೂಕಿನ 15 ಗ್ರಾಪಂಗಳ 251 ಸ್ಥಾನಗಳಿಗೆ ಒಟ್ಟು 585 (310+275) ಮಂದಿ ಹಾಗೂ ಬ್ರಹ್ಮಾವರ ತಾಲೂಕಿನ 27 ಗ್ರಾಪಂಗಳ 361 ಸ್ಥಾನಗಳಿಗೆ ಒಟ್ಟು 825 (449+376) ಮಂದಿ ಸ್ಪರ್ಧೆಯಲ್ಲಿ ಉಳಿದುಕೊಂಡಿದ್ದಾರೆ.

ನಾಲ್ಕು ತಾಲೂಕುಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 149 (15+134) ಸ್ಪರ್ಧಿಸಿದ್ದು, ಇವರಲ್ಲಿ ಉಡುಪಿ ತಾಲೂಕಿನಲ್ಲಿ 42 (9+33), ಹೆಬ್ರಿಯಲ್ಲಿ 20 (0+20), ಬೈಂದೂರಿನಲ್ಲಿ 32 (0+32) ಹಾಗೂ ಬ್ರಹ್ಮಾವರದಲ್ಲಿ 55 (6+48) ಮಂದಿ ಸ್ಪರ್ಧೆಯಲ್ಲಿದ್ದಾರೆ.

ಪರಿಶಿಷ್ಟ ಪಂಗಡಕ್ಕೆ ಸೇರಿದ 182 (56+126) ಮಂದಿ ಸ್ಪರ್ಧೆಯಲ್ಲಿದ್ದರೆ, ಉಡುಪಿಯಲ್ಲಿ 48 (14+34), ಹೆಬ್ರಿಯಲ್ಲಿ 27(14+13), ಬೈಂದೂರಿನಲ್ಲಿ 35 (6+29) ಹಾಗೂ ಬ್ರಹ್ಮಾವರದಲ್ಲಿ 72 (22+50) ಅದೃಷ್ಟ ಪರೀಕ್ಷೆಗೆ ಉಳಿದುಕೊಂಡಿದ್ದಾರೆ.

ಹಿಂದುಳಿದ ವರ್ಗ ‘ಎ’ಗೆ ಸೇರಿದ 543 (276+267) ಮಂದಿ ಸ್ಪರ್ಧೆಯಲ್ಲಿ ಉಳಿದಿದ್ದು, ಇವರಲ್ಲಿ ಉಡುಪಿ ತಾಲೂಕಿನಲ್ಲಿ 166 (85+81), ಹೆಬ್ರಿಯಲ್ಲಿ 19+30), ಬೈಂದೂರಿನಲ್ಲಿ 151 (80+71), ಹಾಗೂ ಬ್ರಹ್ಮಾವರದಲ್ಲಿ 177 (92+85) ಮಂದಿ ಸ್ಪರ್ಧಿಸುತಿದ್ದಾರೆ.

ಹಿಂದುಳಿದ ವರ್ಗ ‘ಬಿ’ಗೆ ಸೇರಿದ 132 (56+76) ಮಂದಿ ಡಿ.22ರಂದು ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಇವರಲ್ಲಿ ಉಡುಪಿಯ 41 (14+27), ಹೆಬ್ರಿಯ 14(10+4), ಬೈಂದೂರಿನ 31(12+19) ಹಾಗೂ ಬ್ರಹ್ಮಾವರದ 46 (20+26) ಮಂದಿ ಸೇರಿದ್ದಾರೆ.

ಇನ್ನು ಸಾಮಾನ್ಯ ವರ್ಗಕ್ಕೆ ಸೇರಿದ 1343 (838+505) ಮಂದಿ ಸ್ಪರ್ಧಿಸುತಿದ್ದಾರೆ. ಇವರಲ್ಲಿ ಉಡುಪಿ ತಾಲೂಕಿನ 387(229+158) ಮಂದಿ, ಹೆಬ್ರಿ ತಾಲೂಕಿನ 145 (88+57) ಮಂದಿ, ಬೈಂದೂರು ತಾಲೂಕಿನ 336 (212+214) ಮಂದಿ ಹಾಗೂ ಬ್ರಹ್ಮಾವರ ತಾಲೂಕಿನ 475 (309+166) ಮಂದಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಎರಡನೇ ಹಂತದ ಚುನಾವಣೆಗೆ 1306 ನಾಮಪತ್ರ

ಡಿ.27ರಂದು ಜಿಲ್ಲೆಯ ಕುಂದಾಪುರ, ಕಾರ್ಕಳ, ಕಾಪು ತಾಲೂಕುಗಳ ಒಟ್ಟು 86 ಗ್ರಾಪಂಗಳ 1243 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ನಾಲ್ಕನೇ ದಿನವಾದ ಇಂದು ಒಟ್ಟು 1306 ನಾಮಪತ್ರಗಳು ಸಲ್ಲಿಕೆಯಾಗಿವೆ. ಇದರಿಂದ ಈವರೆಗೆ ಒಟ್ಟು 2557 ನಾಮಪತ್ರ ಸಲ್ಲಿಕೆಯಾ ದಂತಾಗಿದೆ.

ಇಂದು ಕುಂದಾಪುರದ 43 ಗ್ರಾಪಂಗಳಿಗೆ 473, ಕಾರ್ಕಳದ 27 ಗ್ರಾಪಂಗಳಿಗೆ 560 ಹಾಗೂ ಕಾಪುವಿನ 16 ಗ್ರಾಪಂಗಳಿಗೆ 273 ನಾಮಪತ್ರಗಳನ್ನು ಸ್ವೀಕರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News