ಕಾಸರಗೋಡು : ಡಿ. 15ರಿಂದ ನಿಷೇಧಾಜ್ಞೆ ಜಾರಿ

Update: 2020-12-15 17:56 GMT

ಕಾಸರಗೋಡು : ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯ ಮತ ಎಣಿಕೆ ಹಿನ್ನಲೆಯಲ್ಲಿ  ಡಿ. 15ರ ರಾತ್ರಿ 12  ಗಂಟೆಯಿಂದ ಡಿ . 17 ರ   ರಾತ್ರಿ 12 ಗಂಟೆ ತನಕ ಜಿಲ್ಲೆಯ ಸೂಕ್ಷ್ಮ ಸ್ಥಳಗಳಲ್ಲಿ   144 ರಂತೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

ಅಹಿಕತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ದಂಗವಾಗಿ ನಿಷೇಧಾಜ್ಞೆ ಜಾರಿಗೊಳಿಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

 ಜನರು ಗುಂಪುಗೂಡುವುದು , ಮೆರವಣಿಗೆ ನಡೆಸುವುದು  ಮೊದಲಾದವುಗಳನ್ನುನಿಷೇಧಿಸಲಾಗಿದೆ . ಮಂಜೇಶ್ವರ ಪೊಲೀಸ್ ಠಾಣೆ ಯ  ಉಪ್ಪಳ , ಮಂಜೇಶ್ವರ , ಹೊಸಂಗಡಿ , ಕುಂಜತ್ತೂರು, ಅದೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೋವಿಕ್ಕಾನ , ಇರಿಯಣ್ಣಿ , ಅಡೂರು,   ಕುಂಬಳೆ ಠಾಣಾ ವ್ಯಾಪ್ತಿಯ  ಬಂದ್ಯೋಡು , ಅಡ್ಕ , ಸೀತಾಂಗೋಳಿ , ಉಳುವಾರು , ಮೊಗ್ರಾಲ್ , ಬಂಬ್ರಾಣ ,  ಕಾಸರಗೋಡು ನಗರಸಭಾ ವ್ಯಾಪ್ತಿ ,  ಕಾಸರಗೋಡು ಪೊಲೀಸ್ ಠಾಣಾ ವ್ಯಾಪ್ತಿ ,  ಮೇಲ್ಪರಂಬ , ವಿದ್ಯಾನಗರ   ಕಾಞ0 ಗಾಡ್   ನಗರಸಭಾ, ಅಜನೂರು , ಪಂಚಾಯತ್ , ಬೇಕಲ ಪೊಲೀಸ್ ಠಾಣಾ ವ್ಯಾಪ್ತಿ , ಪೆರಿಯ ಗ್ರಾಮ ಪಂಚಾಯತ್ , ಚಂದೇರ ಪೊಲೀಸ್ ಠಾಣಾ ವ್ಯಾಪ್ತಿಯ ಪಡನ್ನ , ಪಿಲಿಕ್ಕೋಡ್ ಗ್ರಾಮ    ಪಂಚಾಯತ್, ನೀಲೇಶ್ವರ ಪೊಲೀಸ್ ಠಾಣೆ , ನಗರಸಭಾ ವ್ಯಾಪ್ತಿಯಲ್ಲಿ  ನಿಷೇಧಾಜ್ಞೆ  ಜಾರಿಗೊಳಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News