ಕಾಸರಗೋಡು ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ: ಮತ ಎಣಿಕೆ ಆರಂಭ
Update: 2020-12-16 04:08 GMT
ಕಾಸರಗೋಡು : ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯ ಮತ ಎಣಿಕೆಯು ಇಂದು ಆರಂಭಗೊಂಡಿದೆ.
9 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.
ಕಾಸರಗೋಡು ನಗರಸಭೆಯಲ್ಲಿ ಯುಡಿಎಫ್ ಗೆ ಮುನ್ನಡೆಯಾಗಿದೆ. ಕುಂಬಳೆ ಗ್ರಾಮ ಪಂಚಾಯತ್ ನಲ್ಲಿ ಯುಡಿಎಫ್ ಮುನ್ನಡೆ, ಕಾಸರಗೋಡು ನಗರಸಭೆಯಲ್ಲಿ ಯುಡಿಎಫ್ 8, ಬಿಜೆಪಿ 2, ಇತರರು 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ ಎಂದು ತಿಳಿದುಬಂದಿದೆ.
ಕಾಸರಗೋಡು ಜಿಲ್ಲಾ ಪಂಚಾಯತ್ ದೇಲಂಪಾಡಿಯಲ್ಲಿ ಯುಡಿಎಫ್, ತೃಕ್ಕರಿಪುರದಲ್ಲಿ ಎಲ್ ಡಿಎಫ್ ಗೆ ಮುನ್ನಡೆಯಾಗಿರುವುದಾಗಿ ಮಾಹಿತಿ ಲಭಿಸಿದೆ.
ಕಾಸರಗೋಡು ಜಿಲ್ಲಾ ಪಂಚಾಯತ್ ಎಲ್ ಡಿ ಎಫ್ ಗೆ ಮುನ್ನಡೆಯಾಗಿದೆ. ಎಲ್ ಡಿ ಎಫ್ 5, ಯುಡಿಎಫ್ 3, ಬಿಜೆಪಿ 1ರಲ್ಲಿ ಮುನ್ನಡೆಯಾಗಿದೆ. ಬ್ಲಾಕ್ ಪಂಚಾಯತ್ ಎಲ್ ಡಿಎಫ್ ಮುನ್ನಡೆ ಸಾಧಿಸಿದೆ. ನಗರಸಭೆಯಲ್ಲಿ 2 ಎಲ್ ಡಿ ಎಫ್ ಮತ್ತು 1ರಲ್ಲಿ ಯುಡಿಎಫ್ ಮುನ್ನಡೆ ಪಡೆದುಕೊಂಡಿದೆ. ಗ್ರಾಮ ಪಂಚಾಯತ್ ಗಳಲ್ಲೂ ಎಲ್ ಡಿ ಎಫ್ ಗೆ ಮುನ್ನಡೆಯಲ್ಲಿದೆ ಎಂದು ತಿಳಿದುಬಂದಿದೆ.