ಕ್ರೀಡಾ ವಸತಿ ನಿಲಯಗಳ ಪ್ರವೇಶಕ್ಕೆ ಕ್ರೀಡಾಪಟುಗಳ ಆಯ್ಕೆ

Update: 2020-12-17 14:10 GMT

ಉಡುಪಿ, ಡಿ.17: 2021-22ನೇ ಸಾಲಿಗೆ ರಾಜ್ಯದ ಎಲ್ಲಾ ಕ್ರೀಡಾ ವಸತಿ ಶಾಲೆ/ವಸತಿ ನಿಲಯಗಳಿಗೆ ಅರ್ಹಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆಗೆ ಆಯ್ಕೆ ಟ್ರಯಲ್ಸ್‌ನ್ನು ಉಡುಪಿಯ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಗುವುದು.

8ನೇ ತರಗತಿ ಮತ್ತು ಪ್ರಥಮ ಪಿಯುಸಿ ಸೇರ್ಪಡೆಗೆ ಡಿ.30 ಮತ್ತು 31ರಂದು ಬೆಳಗ್ಗೆ 10 ಗಂಟೆಗೆ ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಹಿರಿಯರ ವಿಭಾಗದ ಕ್ರೀಡಾ ವಸತಿ ನಿಲಯ ಪ್ರವೇಶಕ್ಕೆ ಅ್ಯರ್ಥಿಗಳನ್ನು ನೇರವಾಗಿ ವಿಭಾಗ ಮಟ್ಟದಲ್ಲಿ ಆಯ್ಕೆ ಮಾಡುವುದರಿಂದ ಅ್ಯರ್ಥಿಗಳು ನಿಗದಿ ಪಡಿಸಿದ ನಮೂನೆಯಲ್ಲಿ ವೈದ್ಯಕೀಯ ಪ್ರಮಾಣಪತ್ರ ಹಾಗೂ ಧೃಢೀಕರಿಸಿದ ಜನನ ಪ್ರಮಾಣಪತ್ರದೊಂದಿಗೆ ಅರ್ಜಿಯನ್ನು ಜ.15ರೊಳಗೆ ಸಹಾಯಕ ನಿರ್ದೆಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅಜ್ಜರಕಾಡು, ಉಡುಪಿ ಜಿಲ್ಲೆ ಇವರಿಗೆ ಸಲ್ಲಿಸಬೇಕು.
ವಿಭಾಗ ಮಟ್ಟದ ಆಯ್ಕೆ ಪ್ರಕ್ರಿಯೆಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಜನವರಿ 27ರಂದು ಕಿರಿಯರ ವಿಭಾಗ ಮಟ್ಟದಲ್ಲಿ ಹಾಗೂ ಜ.28ರಂದು ಹಿರಿಯರ ವಿಭಾಗ ಮಟ್ಟದ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ತಾಲೂಕು ಕೇಂದ್ರಗಳಲ್ಲಿ ನಡೆಯುವ ಆಯ್ಕೆ ಸಂದರ್ಭ, ಹಾಜರಿರುವ ಇಲಾಖೆಯ ತರಬೇತುದಾರರಿಂದ ಅಥವಾ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಅಜ್ಜರಕಾಡು ಉಡುಪಿ ಇವರ ಕಚೇರಿಯಿಂದ ಅ್ಯರ್ಥಿಗಳು ಅರ್ಜಿ ಮೂನೆಗಳನ್ನು ಪಡೆಯಬಹುದು.

ಈ ಕುರಿತ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0820-2521324 ನ್ನು ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News