ಕೊಣಾಜೆ: ಪೊಲೀಸ್ ಕಾನ್ ಸ್ಟೇಬಲ್ ನಾಪತ್ತೆ

Update: 2020-12-18 06:44 GMT

ಕೊಣಾಜೆ, ಡಿ.18: ಕೆಎಸ್ ಆರ್ ಪಿ ಪೊಲೀಸ್ ಕಾನ್ ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವಕನೋರ್ವ ಕೊಣಾಜೆ ಅಸೈಗೋಳಿಯ ಪೊಲೀಸ್ ವಸತಿ ಗೃಹದಿಂದ ನಾಪತ್ತೆಯಾಗಿರುವ ಬಗ್ಗೆ ಕೊಣಾಜೆ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಸೈಗೋಳಿಯ ಕರ್ನಾಟಕ ಮೀಸಲು ಪೊಲೀಸ್ ಪಡೆಯ ಏಳನೇ ಬೆಟಾಲಿಯನ್ ನ ಕಾನ್ ಸ್ಟೇಬಲ್ ಅನಿಲ್ ಕುಮಾರ್ (29) ನಾಪತ್ತೆಯಾದವರು.

ಚಿಕ್ಕಮಗಳೂರು ಜಿಲ್ಲೆ ಮೂಲದವರಾಗಿರುವ ಅನಿಲ್ ತಾಯಿ, ಪತ್ನಿಯೊಂದಿಗೆ ಅಸೈಗೋಳಿಯ ಪೊಲೀಸ್ ವಸತಿಗೃಹದಲ್ಲಿ ವಾಸವಾಗಿದ್ದರು.

ಗುರುವಾರ  ಸಂಜೆಯಿಂದ ಅವರು ನಾಪತ್ತೆಯಾಗಿದ್ದು, ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೌಟುಂಬಿಕ ಕಲಹದ ಕಾರಣದಿಂದ ಬೇಸತ್ತು ಅವರು ನಾಪತ್ತೆಯಾಗಿರಬಹುದು ಎಂದು ಸಂಶಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News