ಎಸ್ ಎಸ್ ಎಫ್ ಬಾಳೆಪುಣಿ ಶಾಖೆಗೆ ನೂತನ ಸಾರಥ್ಯ

Update: 2020-12-19 09:53 GMT

ಬಾಳೆಪುಣಿ : ಎಸ್ ಎಸ್ ಎಫ್ ಬಾಳೆಪುಣಿ ಶಾಖೆ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಬಾಳೆಪುಣಿ ನೂರುಲ್ ಇಸ್ಲಾಂ ಮದ್ರಸಾ ಹಾಲ್ ನಲ್ಲಿ ನಡೆಯಿತು.

ಶಾಖಾ ಅಧ್ಯಕ್ಷ ರಫೀಕ್ ಸಿ ಎಚ್ ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಶೈಖುನಾ ಬಾಳೇಪುಣಿ ಉಸ್ತಾದ್ ಉದ್ಘಾಟಿಸಿದರು. ಸೆಕ್ಟರ್ ನಾಯಕರಾದ ನೌಷಾದ್ ಮದನಿ ಝೈನುದ್ದೀನ್ ಇರಾ ಮುಂತಾದವರ ಸಮ್ಮುಖದಲ್ಲಿ ಜೊತೆ ಕಾರ್ಯದರ್ಶಿ ನೌಫಲ್ ಸಿ ಎಚ್ ವಾರ್ಷಿಕ ವರದಿ ವಾಚಿಸಿದರು ರಫೀಖ್ ಬಿ ಎನ್ ಲೆಕ್ಕ ಮಂಡಿಸಿದರು.

ಶಾಖೆಯ ನೂತನ ಅಧ್ಯಕ್ಷರಾಗಿ ಸತ್ತಾರ್ ಪಿ ಎಚ್, ಪ್ರಧಾನ ಕಾರ್ಯದರ್ಶಿಯಾಗಿ ತ್ವಯ್ಯಿಬ್ ಸಖಾಫಿ,ಕೋಶಾದಿಕಾರಿಯಾಗಿ  ರಫೀಖ್  ಸಿ ಎಚ್, ಉಪಾಧ್ಯಕ್ಷರಾಗಿ ಅಬೂಬಕ್ಕರ್ ಸಖಾಫಿ, ಸಅದ್ ಬಿ ಕಾರ್ಯದರ್ಶಿಗಳಾಗಿ ನೌಫಲ್ ಸಿ ಎಚ್ ನೌಫಲ್ ಮದನಿ ರಾಶಿದ್ ಅನ್ಸಾರ್ ಕಂಬಳಕೋಡಿ ಅತೀಕ್ ಸಫ್ವಾನ್ ಇವರನ್ನು ಆಯ್ಕೆ ಮಾಡಲಾಯಿತು.

ಜಮಾಅತ್ ಕಾರ್ಯದರ್ಶಿ ಇಬ್ರಾಹಿಂ ಸಿ ಎಚ್ ಹಳೆ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರು ಅಬ್ದುಲ್ಲ ಮುಸ್ಲಿಯಾರ್ ಎಸ್ ವೈ ಎಸ್ ಬ್ರಾಂಚ್ ಅಧ್ಯಕ್ಷರು ಮುಹಮ್ಮದ್ ಹಾಜಿ ಕಾರ್ಯದರ್ಶಿ ಮುಹಮ್ಮದ್ ಸಖಾಫಿ ನುಸ್ರತುಲ್ ಅನಾಮ್ ನ ಬದ್ರುದ್ದುನ್ ಮುಂತಾದವರು ಶುಭ ಹಾರೈಸಿದರು.

ಮುಸ್ತಫ ಸಅದಿ ಸ್ವಾಗತಿಸಿ ನೂತನ ಕಾರ್ಯದರ್ಶಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News