ರಾಷ್ಟ್ರಮಟ್ಟದ ‘ಐಇಇಇ ಯುರೇಕ’ ಸ್ಪರ್ಧೆ: ಬಂಟಕಲ್ ತಂಡ ದ್ವಿತೀಯ

Update: 2020-12-19 14:09 GMT

ಉಡುಪಿ, ಡಿ.19: ಪುಣೆ ಐಇಇಇ ವಿಭಾಗವು ಇತ್ತೀಚೆಗೆ ಆನ್‌ಲೈನ್ ಮೂಲಕ ಏರ್ಪಡಿಸಿದ್ದ ರಾಷ್ಟ್ರಮಟ್ಟದ ‘ಐಇಇಇ ಯುರೇಕ -2020’ ಸ್ಪರ್ಧೆ ಯಲ್ಲಿ ಬಂಟಕಲ್ ಶ್ರೀ ಮದ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಮೂರು ತಂಡವು ದ್ವಿತೀಯ ಸ್ಥಾನ ಗೆದ್ದುಕೊಂಡಿದೆ.

ದೇಶಾದ್ಯಂತ ಸುಮಾರು 150ಕ್ಕೂ ಹೆಚ್ಚು ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ವಿದ್ಯಾರ್ಥಿಗಳಾದ ಆಶುತೋಶ್ ಕುಮಾರ್, ಶಮಿತ ಶಾನ್‌ಭೋಗ್, ನಾಯಕ್ ಆದಿತ್ಯ ಹಾಗೂ ನಮನ್ ಇವರ ಪ್ರಾಜೆಕ್ಟ್ ಕೃಷಿ, ಆಹಾರ ಪ್ರಕ್ರಿಯೆ ಮತ್ತು ಗ್ರಾಮೀಣಾಭಿವೃದ್ದಿಯಲ್ಲಿ ತಾಂತ್ರಿಕತೆ, ವಿದ್ಯಾರ್ಥಿ ಗಳಾದ ರೌನಕ್ ಚೌದರಿ, ಜಾನ್ವಿ ವಿ ನಿಲೇಕಣಿ, ಪ್ರೀತಮ್ ನಾಯಕ್, ಸ್ವಲಿಹ ಶೇಖ್ ಇವರ ಪ್ರಾಜೆಕ್ಟ್ ಶಿಕ್ಷಣ, ಕ್ರೀಡೆ ಮತ್ತು ಮಹಿಳಾ ಸಬಲೀಕರಣದಲ್ಲಿ ತಾಂತ್ರಿಕತೆ ಮತ್ತು ವಿದ್ಯಾರ್ಥಿಗಳಾದ ಶ್ರೀವತ್ಸ, ಚೈತ್ರ ಬಿ.ಆರ್., ಫರ್ಡಿನೆಂಡ್ ಕ್ಯಾಸ್ಟಲಿನೊ, ವಿಕಾಸ್ ರಾವ್ ಇವರ ಪ್ರಾಜೆಕ್ಟ್ ರಾಷ್ಟ್ರೀಯ ಭದ್ರತೆ ಮತ್ತು ವಿಪತ್ತು ನಿರ್ವಹಣೆಯಲ್ಲಿ ತಾಂತ್ರಿಕತೆ ದ್ವಿತೀಯ ಸ್ಥಾನ ಗಳಿಸಿರುವ ಯೋಜನೆ ಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News