ಮೂಡುಬಿದಿರೆ: ಫಾರ್ಚ್ಯೂನ್ ಹೈವೇ 2 ಯೋಜನೆಗೆ ಶಿಲಾನ್ಯಾಸ

Update: 2020-12-19 17:33 GMT

ಮೂಡುಬಿದಿರೆ: ಫಾರ್ಚ್ಯೂನ್ ಪ್ರಮೋಟರ್ಸ್ ಮೂಡುಬಿದಿರೆ ಇವರ ನೂತನ ಪ್ರಾಜೆಕ್ಟ್ ಹೈವೇ 2 ಇದರ ಶಿಲಾನ್ಯಾಸ ಕಾರ್ಯಕ್ರಮವು ಮೂಡುಬಿದಿರೆ ಬಡಗಬಸದಿ ಬಳಿಯ ಫಾರ್ಚ್ಯೂನ್ ಹೈವೇ 1 ಸಮೀಪ ಶನಿವಾರ ಸಾಯಂಕಾಲ ನಡೆಯಿತು.

ಮೂಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ ಎ.ಕೋಟ್ಯಾನ್ ಅವರು ಫಾರ್ಚ್ಯೂನ್ ಹೈವೇ ಅವರ ಎರಡನೇ ಯೋಜನೆಯನ್ನು ಅನಾವರಗೊಳಿಸಿದರು‌‌.

ಮೂಡುಬಿದಿರೆಯು ಮಹಾನಗರಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಬೆಳೆಯುತ್ತಿರುವ ನಗರ. ಮೂಡುಬಿದಿರೆ ಶ್ರೇಷ್ಠತೆಯ ಜೊತೆಗೆ ಇಲ್ಲಿ ಬಂಡವಾಳ ಹೂಡಿ, ವಿವಿಧ ಸ್ತರಗಳ ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಜನರು ನಿರೀಕ್ಷಿಸುತ್ತಾರೆ. ಅದನ್ನು ಸ್ವೀಕರಿಸುತ್ತಾರೆ‌. ಯಾವುದೇ ಸಂಸ್ಥೆಯಲ್ಲಿ ಗುಣಮಟ್ಟದ ಸೇವೆಯನ್ನು ನೀಡಿದರೆ ಅವರಿಗೆ ಅವರ ಕ್ಷೇತ್ರದಲ್ಲಿ ಯಶಸ್ಸು ಸಿಗುವುದು ಕಷ್ಟವೇನಲ್ಲ. ಫಾರ್ಚ್ಯೂನ್ ಗ್ರೂಪ್ ತಂಡದ ನಾಲ್ವರು ಯುವ ಉತ್ಸಾಹಿ ಉದ್ಯಮಿಗಳು ಸಂಸ್ಥೆಯನ್ನು ಗುಣಮಟ್ಟದೊಂದಿಗೆ ಮುನ್ನಡೆಸುತ್ತಿದ್ದಾರೆ ಎನ್ನುವ ನಂಬಿಕೆಯೊಂದಿಗೆ ಅವರ ಯಶಸ್ವಿ ಎರಡನೇ ಯೋಜನೆಗೆ ಮುಂದಡಿಯಿಡುತ್ತಿರುವುದು ಆಶಾದಾಯಕ ಬೆಳವಣಿಗೆ. ಸರ್ಕಾರದ ನಿಯಮವಳಿ ಪ್ರಕಾರ ಉತ್ತಮ ಯೋಜನೆಗಳ ಹೂಡಿಕೆದಾರರಿಗೆ ಖಂಡಿತ ನಮ್ಮ ಬೆಂಬಲವಿದೆ ಎಂದು ಹೇಳಿದರು.

ಕಾರ್ಕಳ ಶಾಸಕ, ವಿಧಾನಸಭೆಯ ಮುಖ್ಯ ಸಚೇತಕ ಸುನೀಲ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮೂಡುಬಿದಿರೆಯಲ್ಲಿ ಈಗಾಗಲೇ ತಮ್ಮ ಪ್ರಥಮ ಯೋಜನೆಯೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಫಾರ್ಚ್ಯೂನ್ ಪ್ರಮೋಟರ್ ಸಬ್ ತಂಡವು ಕಾರ್ಕಳ ತಾಲೂಕಿನಲ್ಲಿ ತಮ್ಮ ಯೋಜನೆಗಳನ್ನು ರೂಪಿಸಿದ್ದು, ಅದನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸಿ ಎಂದು ಶುಬಾ ಹಾರೈಸಿದರು.

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬೆಂಗಳೂರು ನಗರ ಎಸ್ಪಿ, ಐಪಿಎಸ್ ಅಧಿಕಾರಿ ಅಬ್ದುಲ್ ಅಹದ್ ಮಾತನಾಡಿ, ಊರಿನ ಅಭಿವೃದ್ಧಿಗಾಗಿ ಹೂಡಿಕೆ ಮಾಡುವ, ಅಲ್ಲಿನ ಪರಿಸರದ ಕಾರ್ಮಿಕರಿಗೆ ಉದ್ಯೋಗ ಅವಕಾಶ ಮಾಡಿಕೊಡುವ ವ್ಯವಸ್ಥೆ ಒಂದು ಸಮಾಜಸೇವೆ‌‌. ಅದನ್ನು ಜನರು ಒಪ್ಪಿಕೊಳ್ಳುತ್ತಾರೆ ಎಂದರು.

ಮಾಜಿ ಸಚಿವ ಕೆ.ಅಭಯಚಂದ್ರ, ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಾಯ್ಲಸ್ ತಾಕೋಡೆ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಎಂಸಿಎಸ್ ಬ್ಯಾಂಕ್ ಸಿಇಒ ಚಂದ್ರಶೇಖರ್ ಎಂ. ಮುಖ್ಯ ಅತಿಥಿಯಾಗಿದ್ದರು.

ಫಾರ್ಚ್ಯೂನ್ ಗ್ರೂಪ್ ಪಾಲುದಾರರಾದ ಅಬುಲ್ ಅಲಾ ಪುತ್ತಿಗೆ, ಮಹೇಂದ್ರ ವರ್ಮ, ರೋನಿ ಫೆರ್ನಾಂಡೀಸ್, ಡೆನಿಸ್ ಪೆರೇರಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News