​ಎಐಸಿಸಿ ಕಾರ್ಯದರ್ಶಿಯಾಗಿ ಪಿವಿ ಮೋಹನ್ ನೇಮಕ

Update: 2020-12-19 16:00 GMT

ಮಂಗಳೂರು, ಡಿ. 19: ಕೆಪಿಸಿಸಿ ಕಾರ್ಯದರ್ಶಿಯಾಗಿದ್ದ‌ ಮಾಜಿ‌ ಪತ್ರಕರ್ತ ಪಿ.ವಿ.ಮೋಹನ್ ಅವರನ್ನು ಎಐಸಿಸಿ ಕಾರ್ಯದರ್ಶಿಯಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ‌ ವೇಣುಗೋಪಾಲ್ ನೇಮಕಗೊಳಿಸಿದ್ದಾರೆ. ಅಲ್ಲದೆ ಕೇರಳದ ಉಸ್ತುವಾರಿಯನ್ನಾಗಿಯೂ ನೇಮಕಗೊಳಿಸಲಾಗಿದೆ.

ಸಾಮಾಜಿಕ ಹೋರಾಟಗಾರರಾಗಿಯೂ ಗುರುತಿಸಿಕೊಂಡಿದ್ದ ಪಿ.ವಿ.ಮೋಹನ್ ಈ ಹಿಂದೆ ಎಐಸಿಸಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಪಕ್ಷದ ವಕ್ತಾರರಾಗಿ, ಚುನಾವಣೆಗಳ ವೀಕ್ಷಕರಾಗಿ, ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News