ಹೊಸ ತಲೆಮಾರು ರೈತ ಜ್ಞಾನದಿಂದ ಹಿಂದೆ ಸರಿಯುತ್ತಿದೆ: ನರೇಂದ್ರ ರೈ ದೇರ್ಲ

Update: 2020-12-19 16:22 GMT

ಮುಡಿಪುವಿನಲ್ಲಿ ಜಿಲ್ಲಾ ಮಟ್ಟದ ಅಕ್ಷರೋತ್ಸವ
ಕೊಣಾಜೆ: ಮಾದರಿ ಗ್ರಾಮ ಅಭಿಯಾನದಡಿ ಜನಶಿಕ್ಷಣ ಟ್ರಸ್ಟ್, ಗ್ರಾಮ ವಿಕಾಸ ಕೇಂದ್ರ ಬಾಳೆಪುಣಿ ಗ್ರಾಮ ಪಂಚಾಯತ್, ಜಿಲ್ಲಾ ಸಾಕ್ಷರತಾ ಸಮಿತಿ, ಅಪ್ನಾದೇಶ್,ಚಿತ್ತಾರ ಬಳಗ, ಪ್ರ ವೃತ್ತಿ ಕೌಶಲ್ಯ ತರಬೇತಿ ಕೇಂದ್ರ, ಸುಗ್ರಾಮ ಜಾಗೃತಿ ವೇದಿಕೆ, ಆದಿವಾಸಿ ಸಂಘ ಇವರ ಸಹಯೋಗದಲ್ಲಿ ನವಸಾಕ್ಷರರ ಸಂಘಟನೆಯ 29ನೇಯ ವರ್ಷಾಚರಣೆ `ಜಿಲ್ಲಾ ಮಟ್ಟದ ಅಕ್ಷರೋತ್ಸವ -2020, ಸ್ವೀಪ್ ಮತದಾರರ ಜಾಗೃತಿ ಕಾರ್ಯಕ್ರಮ ಶನಿವಾರ ಮುಡಿಪುವಿನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಅನುಭವವನ್ನು ಹಂಚಿಕೊಂಡ ನವಸಾಕ್ಷರೆ ಯಶೋಧ ಲಾಯಿಲ ಅವರು, ಸಾಕ್ಷರತಾ ಜಾಗೃತಿಯ ಬಳಿಕ ನೂರಾರು ಜನರು ಮದ್ಯಮುಕ್ತರಾಗಿ ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ .ಸಾಕ್ಷರತೆಗೆ ಸೇರಿ ಮೊದಲು ನನ್ನ ಮನೆ ಬೆಳಗಿಸಿದೆ ಬಳಿಕ ನನ್ನೂರು ಸೇರಿದಂತೆ ಸುತ್ತಮುತ್ತಲಿನ ನೂರಾರು ಮನೆಗಳಲ್ಲಿ ಇಂದು ಸಂತಸದ ಬೆಳಕು ಮೂಡಿದೆ ಎಂದು  ಹೇಳಿದರು.

ಸಾಕ್ಷರತೆಯಲ್ಲಿ ತೊಡಗಿಸಿಕೊಂಡ ಬಳಿಕ ನನ್ನ ಗಂಡನನ್ನು ಮದ್ಯಮುಕ್ತಗೊಳಿಸಲು ಪ್ರಯತ್ನಿಸಿದೆ. ಬಳಿಕ ನನ್ನಂತಹ ಮಹಿಳೆಯರನ್ನು ಒಟ್ಟುಗೂಡಿಸಿ ನಮ್ಮ ಗ್ರಾಮ ಸೇರಿದಂತೆ ಪಕ್ಕದ ಊರುಗಳಲ್ಲಿಯೂ ಜಾಗೃತಿ ಮೂಡಿದ್ದರಿಂದ ನೂರಾರು ಕುಟುಂಬದ ಸದಸ್ಯರಲ್ಲಿದ್ದ ಮದ ವ್ಯಸನ ದೂರವಾಯ್ತು, ಇಂತಹ ಕಾರ್ಯಗಳಿಂದ ಜನರಿಂದಲೂ, ಸಮಾಜದಿಂದಲೂ ನಾವು ಗೌರವವನ್ನು ಪಡೆಯುವಂತಾಯಿತು ಎಂದರು.

ನವಸಾಕ್ಷರರಾದ  ನಾರಾಯಣ, ಕಮಲಾ, ಲೀಲಾ, ಗಿರಿಜಾ, ತನಿಯ, ಹುಸೈನ್ ತಮ್ಮ ಸಾಕ್ಷರತೆಯ ಬಳಿಕದ ಜೀವನದ ಕಥನಗಳನ್ನು ವಿವರಿಸಿದರು. ಸಾಕ್ಷರತಾ ಪ್ರೇರಕರು ಈ ಸಂದರ್ಭದಲ್ಲಿ ತಮ್ಮ ಅನುಭವವನ್ನು ತಿಳಿಸಿದರು. 

ಕಾರ್ಯಕ್ರಮದಲ್ಲಿ  ಎನ್‍ಆರ್‍ಎಲ್‍ಎಂನ ಸಂಜೀವಿನಿ ಒಕ್ಕೂಟದ ಪ್ರಗತಿ ಮತ್ತು ಸಾಧನೆಯನ್ನು ಸಂಘದ ಮಹಿಳಾ ಮುಖ್ಯಸ್ಥರು ತಿಳಿಸಿದರೆ ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ ಹಕೀಂ ಕಣ್ಣೂರು, ರೋಶನ್ ಬಾಳೆಪುಣಿ ಮಾಹಿತಿ ನೀಡಿದರು. ಕಸ ವಿಲೇವಾರಿ ಸೇರಿದಂತೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡ ಸಾಧಕ ಇಸ್ಮಾಯಿಲ್ ಬಾಳೆಪುಣಿ ಮಾಹಿತಿ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಸ್ವಾವಲಂಬಿ ಜೀವನ `ಆತ್ಮನಿರ್ಬರ' ಅಂಗವಾಗಿ `ಸ್ವರ್ಣಧಾರ` ಮಿಶ್ರತಳಿ ಕೋಳಿ ಮರಿಗಳ ಮಾಹಿತಿಯನ್ನು ಶೈಲಾಶ್ರೀ ಪ್ರಕಾಶ್ ಮಂಜೇಶ್ವರ ' ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಕೋಳಿಮರಿಗಳ ವಿತರಣೆಯೂ ನಡೆಯಿತು.  

ಕಾರ್ಯಕ್ರಮವನ್ನು ಸೋಲಾರ್ ದೀಪ ಉರಿಸಿ ಉದ್ಘಾಟಿಸಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಪುತ್ತೂರು ಇದರ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ| ನರೇಂದ್ರ ರೈ ದೇರ್ಲ ಮಾತನಾಡಿ, ಭೂಮಿ ಸೃಷ್ಟಿಯಾಗಿ ಸಾವಿರಾರು ವರ್ಷಗಳಾದರೂ, ನಾಗರಿಕತೆಯಾಗಿ ನಾಲ್ಕು ಸಾವಿರ ವರ್ಷಗಳಾಗಿವೆ. ಆದರೆ ಕಳೆದ 40 ವರ್ಷಗಳಲ್ಲಿ ನಲ್ವತ್ತು ಸಾವಿರ ವರ್ಷಗಳಲ್ಲಿ ಆಗದ ವಿನಾಶ ನಡೆದಿದೆ. ಜನಸಂಖ್ಯೆ ಹೆಚ್ಚಳವಾಗುತ್ತಿದ್ದು, ಭೂಮಿಯ ಧಾರಣಾ ಶಕ್ತಿ ಕಡಿಮೆಯಾಗಿದೆ. ಉಸಿರಾಡುವ ಗಾಳಿಯೂ ಸಿಗದ ಸ್ಥಿತಿ ಮುಂದಿನ ದಿನಗಳಲ್ಲಿ ನಿರ್ಮಾಣವಾಗಿದ್ದು, ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಪರಿಸರ ನಾಶ ಸೇರಿದಂತೆ ಸಮಾಜಿಕಪಿಡುಗುಗಳಿಗೆ ಪ್ರಥಮವಾಗಿದೆ ಎಂದರು.

ಈ ಸಂದರ್ಭದಲ್ಲಿ ಉದ್ಯಮಿ ರಮೇಶ್ ಶೇಣವ, ನಾಗೇಶ್ ಕಲ್ಲೂರು, ಶಿವಪ್ರಸಾದ್ ಆಳ್ವ, ಪ್ರಾಧ್ಯಾಪಕ ಡಾ. ನವೀನ್ ಕೊಣಾಜೆ, ಒಂಬುಡ್ಸ್‍ಮನ್ ರಾಮದಾಸ್ ಗೌಡ, ಚಂದ್ರಹಾಸ ಕಣಂತೂರು, ಯೋಗೀಶ್ ಪಡುಮನೆ, ಅರುಣ್ ಕುಮಾರ್ ಸುವರ್ಣ, ಜಿಲ್ಲಾ ವಯಸ್ಕರ ಶಿಕ್ಷಣಾ„ಕಾರಿ ಸುಧಾಕರ್, ಘನಸಂಪನ್ಮೂಲ ನಿರ್ವಹಣೆ ಸಮಿತಿ ಅಧ್ಯಕ್ಷ ಇಬ್ರಾಹಿಂ ತಪಸ್ಯ, ಗಂಗಾಧರ ಶೆಟ್ಟಿ, ಪತ್ರಕರ್ತರಾದ ಪುಷ್ಪರಾಜ್,  ಗುರುವಪ್ಪ ಬಾಳೆಪುಣಿ, ಪ್ರಕಾಶ್ ಮಂಜೇಶ್ವರ, ಚಿತ್ತಾರ ಸಂಸ್ಥೆಯ ಸತೀಶ್ ಇರಾ, ಚಂದ್ರಶೇಖರ ಪಾತೂರು, ಸೆಲ್ಕೋದ ರವೀನಾ, ಪಂಚಾಯತ್ ಅಭಿವೃದ್ಧಿ ಅ„ಕಾರಿ ಸುನಿಲ್ ಕುಮಾರ್, ಕಲಾ ಶಿಕ್ಷಕ ತಾರನಾಥ ಕೈರಂಗಳ ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ  ಮತದಾರ ಜಾಗೃತಿ ಮಾಹಿತಿ ಮತ್ತು ಪ್ರತಿಜ್ಞೆ ಸ್ವೀಕಾರ, ಪ್ರತಿಯೊಬ್ಬರಿಗೂ ಸಂವಿದಾನ ಮಾಹಿತಿ ಪುಸ್ತಕ ವಿತರಣೆ ನಡೆಯಿತು.

ಜನಶಿಕ್ಷಣ ಟ್ರಸ್ಟ್ ನಿರ್ದೇಶಕರು ಹಾಗೂ ಸ್ವಚ್ಛತಾ ರಾಯಬಾರಿ ಶೀನ ಶೆಟ್ಟಿ ಮತ್ತು  ಕೃಷ್ಣ ಮೂಲ್ಯ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News