ಪುತ್ತೂರು: ತಾಲೂಕು ಮುಸ್ಲಿಂ ಜಮಾಅತ್ ಅಧ್ಯಕ್ಷರಾಗಿ ಕೆ.ಪಿ. ಮಹಮ್ಮದ್ ಹಾಜಿ
ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ತಾಲೂಕು ಮುಸ್ಲಿಂ ಜಮಾಅತ್‍ನ ನೂತನ ಅಧ್ಯಕ್ಷರಾಗಿ ಉದ್ಯಮಿ ಕೆ.ಪಿ. ಮಹಮ್ಮದ್ ಹಾಜಿ ಆಯ್ಕೆಯಾಗಿದ್ದಾರೆ.
ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್‍ನ ಸ್ಥಾಪಕರಾಗಿದ್ದು ಹಲವಾರು ವರ್ಷಗಳ ಕಾಲ ಅಧ್ಯಕ್ಷರಾಗಿ ಸಂಘಟನೆಯನ್ನು ಮುನ್ನಡೆಸಿದ್ದ ಹಾಜಿ ಎಸ್ ಇಬ್ರಾಹಿಂ ಕಮ್ಮಾಡಿ ಅವರು ಇತ್ತೀಚೆಗೆ ನಿಧರಾದ ಹಿನ್ನಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಉಪಾಧ್ಯಕ್ಷರಾಗಿದ್ದ ಕೆ.ಪಿ. ಮಹಮ್ಮದ್ ಹಾಜಿ ಅವರನ್ನು ಬುಧವಾರ ಕಮ್ಮಾಡಿ ಸಭಾಂಗಣದಲ್ಲಿ ನಡೆದ ಸಂಯುಕ್ತ ಜಮಾಅತ್ ಸಭೆಯಲ್ಲಿ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು.
ಅಬ್ದುಲ್ ಹಮೀದ್ ದಾರಿಮಿ ಸಂಪ್ಯ ದುವಾ ನೆರವೇರಿಸಿದರು.
ಸಭೆಯಲ್ಲಿ ಸಂಯುಕ್ತ ಜಮಾಅತ್‍ನ ಸಂಘಟನಾ ಕಾರ್ಯದರ್ಶಿ ಕೆ.ಎಂ. ಬಾವಾ ಹಾಜಿ, ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಕೋಶಾಧಿಕಾರಿ ಬಿ.ಎ. ಶಕೂರ್ ಹಾಜಿ, ಎಸ್.ಬಿ. ಮಹಮ್ಮದ್ ದಾರಿಮಿ, ಹುಸೈನ್ ದಾರಿಮಿ ರೆಂಜಲಾಡಿ. ದ.ಕ. ಜಿ.ಪಂ ಸದಸ್ಯ ಎಂ.ಎಸ್. ಮಹಮ್ಮದ್, ಯು. ಅಬ್ದುಲ್ಲಾ ಹಾಜಿ, ಹಸೈನಾರ್ ಹಾಜಿ, ಹಮೀದ್ ಸೋಂಪಾಡಿ, ರಶೀದ್ ಹಾಜಿ ಪರ್ಲಡ್ಕ, ಯೂಸುಫ್ ಹಾಜಿ ಕೈಕಾರ, ಹಸನ್ ಹಾಜಿ ಸಿಟಿ ಬಜಾರ್, ಸುಲೈಮಾನ್ ಹಾಜಿ ಸಾಲ್ಮರ, ಅಬ್ದುಲ್ ಕರೀಂ ಸೋಂಪಾಡಿ, ಪುತ್ತುಬಾವ ಹಾಜಿ, ಉಮ್ಮರ್ ಹಾಜಿ ಅತ್ತಿಕೆರೆ. ಇಬ್ರಾಹಿಂ ಹಾಜಿ ತಿಂಗಳಾಡಿ, ಅಶ್ರಫ್ ಪರ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.
ಸಂಯುಕ್ತ ಜಮಾಅತ್‍ನ ಪ್ರಧಾನ ಕಾರ್ಯದರ್ಶಿ ಎಲ್.ಟಿ. ರಝಾಕ್ ಹಾಜಿ ಸ್ವಾಗತಿಸಿದರು. ಸದಸ್ಯ ಅಶ್ರಫ್ ಕಲ್ಲೇಗ ವಂದಿಸಿದರು.