ಮೂಡುಬಿದಿರೆ: ಬೈಕಿಗೆ ಲಾರಿ ಢಿಕ್ಕಿ; ಬೈಕ್ ಸವಾರ ಮೃತ್ಯು

Update: 2020-12-20 10:13 GMT

ಮೂಡುಬಿದಿರೆ, ಡಿ.20: ಬೈಕಿಗೆ ಬೋರ್ ವೆಲ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಕೊಂಪದವು ತಿರುವಿನಲ್ಲಿ ರವಿವಾರ ಬೆಳಗ್ಗೆ ಸಂಭವಿಸಿದೆ.

ಮುಚ್ಚೂರು ಕಾನ ನಿವಾಸಿ ಚಂದ್ರಶೇಖರ್ ಗೌಡ (32) ಮೃತಪಟ್ವವರು. ಕೂಲಿ ಕಾರ್ಮಿಕರಾಗಿದ್ದ ಇವರು ರವಿವಾರ ಬೆಳಗ್ಗೆ ಕುಡುಪು ದೇವಸ್ಥಾನದಲ್ಲಿ ಷಷ್ಠಿ ಜಾತ್ರೆಗೆ ಹೋಗಿದ್ದು, ಅಲ್ಲಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

 ಕೊಂಪದವು ತಿರುವಿನಲ್ಲಿ ಬೋರ್ ವೆಲ್ ಲಾರಿ ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿದ್ದು, ಈ ವೇಳೆ ಬೈಕ್‍ನಿಂದ ರಸ್ತೆಗೆ ಎಸೆಯಲ್ಪಟ್ಟ ಚಂದ್ರಶೇಖರ್ ತಲೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ಅವರು ಸ್ಥಳದಲ್ಲೆ ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News