2ನೇ ಹಂತದ ಗ್ರಾಪಂ ಚುನಾವಣೆ : 3,421ಅಭ್ಯರ್ಥಿಗಳು ಕಣದಲ್ಲಿ

Update: 2020-12-20 14:43 GMT

ಮಂಗಳೂರು, ಡಿ.20: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿ.27ರಂದು ನಡೆಯುವ ಎರಡನೇ ಹಂತದ ಚುನಾವಣೆಯ ಕಣದಲ್ಲಿ 3,421 ಅಭ್ಯರ್ಥಿಗಳು ಉಳಿದಿದ್ದಾರೆ.

ಬೆಳ್ತಂಗಡಿ 46, ಪುತ್ತೂರು 22, ಸುಳ್ಯ 25 ಮತ್ತು ಕಡಬ 21 ಗ್ರಾಪಂ ಸೇರಿದಂತೆ ಒಟ್ಟು 114 ಗ್ರಾಪಂಗಳ 1,541 ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿತ್ತು. ಈ ಪೈಕಿ 41 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯಾಗಿದೆ. ಇನ್ನು 1,500 ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆಯಲಿದೆ.

ಅನುಸೂಚಿತ ಜಾತಿಯಲ್ಲಿ 371, ಅನುಸೂಚಿತ ಪಂಗಡದಲ್ಲಿ 272, ಹಿಂದುಳಿದ ‘ಅ’ ವರ್ಗದಲ್ಲಿ 699, ಹಿಂದುಳಿದ ‘ಬಿ‘ ವರ್ಗದಲ್ಲಿ 138, ಸಾಮಾನ್ಯ 1,921 ಸೇರಿದಂತೆ ಒಟ್ಟು 3,421 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News