ಉಡುಪಿ ಗ್ರಾಪಂ ಚುನಾವಣೆಯ ಮೊದಲ ಹಂತ: 3.69 ಲಕ್ಷ ಮತದಾರರಲ್ಲಿ 2.73 ಲಕ್ಷ ಮಂದಿಯಿಂದ ಮತದಾನ

Update: 2020-12-23 12:06 GMT

ಉಡುಪಿ, ಡಿ.23: ಜಿಲ್ಲೆಯ ಉಡುಪಿ, ಬ್ರಹ್ಮಾವರ, ಹೆಬ್ರಿ ಹಾಗೂ ಬೈಂದೂರು ತಾಲೂಕುಗಳ 66 ಗ್ರಾಪಂಗಳ 543 ಮತಗಟ್ಟೆಗಳಲ್ಲಿ ಮಂಗಳ ವಾರ ನಡೆದ ಮೊದಲ ಹಂತದ ಸಾರ್ವತ್ರಿಕ ಗ್ರಾಪಂ ಚುನಾವಣೆಯಲ್ಲಿ ಒಟ್ಟು 3,69,281 ಮತದಾರರಲ್ಲಿ 2,73,500 ಮಂದಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ ಎಂದು ಉಡುಪಿ ಅಪರ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ನಾಲ್ಕು ತಾಲೂಕುಗಳಲ್ಲಿ ಸರಾಸರಿ ಶೇ.74.06ರಷ್ಟು ಮತದಾನವಾಗಿದ್ದು, ಹೆಬ್ರಿ ತಾಲೂಕಿನಲ್ಲಿ ಅತ್ಯಧಿಕ ಶೇ.79.41 ಹಾಗೂ ಬೈಂದೂರು ತಾಲೂಕಿನಲ್ಲಿ ಕನಿಷ್ಠ ಶೇ.71.28ರಷ್ಟು ಮತದಾನವಾಗಿದೆ. ಇನ್ನುಳಿದಂತೆ ಉಡುಪಿ ತಾಲೂಕಿ ನಲ್ಲಿ ಶೇ.74.80 ಹಾಗೂ ಬ್ರಹ್ಮಾವರ ತಾಲೂಕಿ ನಲ್ಲಿ ಶೇ.73.69ರಷ್ಟು ಮತದಾನವಾಗಿರುವ ಬಗ್ಗೆ ವರದಿಗಳು ಬಂದಿವೆ.

ಮೊದಲ ಹಂತದಲ್ಲಿ ಚುನಾವಣೆ ನಡೆದ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಒಟ್ಟಾರೆಯಾಗಿ 1,78,625 ಪುರುಷ ಹಾಗೂ 1,90,651 ಮಹಿಳಾ ಹಾಗೂ ಐವರು ಇತರ ಮತದಾರರು ಸೇರಿದಂತೆ ಒಟ್ಟು 3,69,281 ಮತದಾರರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದು, ಇವರಲ್ಲಿ 1,28,753 ಪುರುಷರು, 1,44,745 ಮಹಿಳೆಯರು ಹಾಗೂ ಇಬ್ಬರು ಇತರರು ಸೇರಿದಂತೆ ಒಟ್ಟು 2,73,500 ಮಂದಿ ಮತ ಚಲಾಯಿಸಿದ್ದರು. ಈ ಮೂಲಕ ಶೇ.72.08 ಪುರುಷರು ಹಾಗೂ ಶೇ.75.92 ಮಹಿಳೆಯರು ಹಾಗೂ ಶೇ.40 ಇತರೆ ಮತದಾರರು 543 ಮತಗಟ್ಟೆಗಳಲ್ಲಿ ಹಕ್ಕು ಚಲಾಯಿಸಿದಂತಾಗಿದೆ.

ಜಿಲ್ಲೆಯ ಉಳಿದ ಕುಂದಾಪುರ (44), ಕಾಪು(16) ಹಾಗೂ ಕಾರ್ಕಳ (27) ತಾಲೂಕುಗಳ ಒಟ್ಟು 87 ಗ್ರಾಪಂಗಳ 1243 ಸ್ಥಾನಗಳಿಗೆ ಡಿ.27ರ ರವಿವಾರ ಮತದಾನ ನಡೆಯಲಿದೆ.

ಉಡುಪಿ ತಾಲೂಕಿನ 16 ಗ್ರಾಪಂಗಳ 161 ಮತಗಟ್ಟೆಗಳಲ್ಲಿ 53,809 ಪುರುಷ, 58,105 ಮಹಿಳಾ ಹಾಗೂ ನಾಲ್ಕು ಇತರೆ (ಒಟ್ಟು 1,11,918) ಮತದಾರರ ಪೈಕಿ 40,162ಪುರುಷ, 43,553 ಮಹಿಳಾ ಹಾಗೂ ಇಬ್ಬರು ಇತರೆ ಮತದಾರರು (ಒಟ್ಟು 83,717) ನಿನ್ನೆ ಮತ ಚಲಾಯಿಸಿದ್ದರು. ಶೇ.74.64 ಪುರುಷ, ಶೇ.74.86 ಮಹಿಳೆಯರು ಸೇರಿ ಒಟ್ಟು ಶೇ.74.80 ಮಂದಿ ಮತ ಹಾಕಿದ್ದರು.

ಹೆಬ್ರಿ ತಾಲೂಕಿನ 9ಗ್ರಾಪಂಗಳ 62ರಲ್ಲಿ 60 ಮತಗಟ್ಟೆಗಳಲ್ಲಿದ್ದ 19,276 ಪುರುಷ, 20,266 ಮಹಿಳಾ ಮತದಾರರ (39,542) ಪೈಕಿ ಮಂಗಳವಾರ 15,160 ಪುರುಷ, 16,241 ಮಹಿಳಾ ಮತದಾರರು (31,401) ತಮ್ಮ ಹಕ್ಕು ಚಲಾಯಿಸಿದ್ದರು. ಶೇ.78.65ಪುರುಷ, ಶೇ.80.14 ಮಹಿಳೆಯರು ಸೇರಿ ಒಟ್ಟು ಶೇ.79.41ರಷ್ಟು ಮಂದಿ ಓಟು ಹಾಕಿದ್ದರು.

ಬ್ರಹ್ಮಾವರ ತಾಲೂಕಿನ 27ರ ಪೈಕಿ 26ಗ್ರಾಪಂಗಳ 209 ಮತಗಟ್ಟೆಗಳ ಪೈಕಿ 194 ಮತಗಟ್ಟೆಗಳಲ್ಲಿ ನಿನ್ನೆ ಮತದಾನ ನಡೆದಿತ್ತು. ಇಲ್ಲಿ 62,166 ಪುರುಷ, 66,996 ಮಹಿಳಾ ಮತದಾರರ (1,29,162) ಪೈಕಿ ಮಂಗಳವಾರ 44,924 ಪುರುಷ, 50,259 ಮಹಿಳಾ ಮತದಾರರು (95,183) ತಮ್ಮ ಮತ ಹಾಕಿದ್ದರು. ಶೇ.72.26 ಪುರುಷ, ಶೇ.75.02 ಮಹಿಳಾ ಮತದಾರರು ಸೇರಿ ಸರಾಸರಿ ಶೇ.73.69 ಮಂದಿ ಮತದಾನದಲ್ಲಿ ಭಾಗಿಯಾಗಿದ್ದರು.

ಬೈಂದೂರು ತಾಲೂಕಿನ 15 ಗ್ರಾಪಂಗಳ ಒಟ್ಟು 128 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, ಇಲ್ಲಿ 43,374 ಪುರುಷ, 45,284 ಮಹಿಳಾ ಹಾಗೂ ಒಬ್ಬ ಮತದಾರರ (ಒಟ್ಟು 88,659) ಪೈಕಿ ನಿನ್ನೆ 28,507 ಪುರುಷ, 34,692 ಮಹಿಳಾ ಮತದಾರರು (ಒಟ್ಟು 63,199) ತಮ್ಮ ಮತ ಚಲಾಯಿಸಿದ್ದರು. ಇಲ್ಲಿ ಶೇ.65.72 ಪುರುಷ, ಶೇ.76.61 ಮಹಿಳಾ ಮತದಾರರು ಸೇರಿ ಶೇ.71.28 ಮಂದಿ ತಮ್ಮ ಮತ ಚಲಾಯಿಸಿದ್ದರು ಎಂದು ಅಪರ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News