ಮರಗಳ ತೆರವಿಗೆ ಸಾರ್ವಜನಿಕರ ಅಹವಾಲು ಸಭೆ

Update: 2020-12-23 14:19 GMT

ಉಡುಪಿ, ಡಿ.23: ಕುಂದಾಪುರ ತಾಲೂಕು ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿ ಕಿ.ಮೀ 312.40ರಿಂದ 335.00ರವರೆಗೆ (ಮಡಾಮಕ್ಕಿಯಿಂದ ಹಾಲಾಡಿವರೆಗೆ) ಆಯ್ದ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಅಡಚಣೆಯಾಗಿರುವ ವಿವಿಧ ಜಾತಿಯ 181 ಮರಗಳನ್ನು ಹಾಗೂ ಬ್ರಹ್ಮಾವರ ತಾಲೂಕು ಆವರ್ಸೆ ಹಾಗೂ ಹಿಲಿಯಾಣ ಗ್ರಾಮದ ಕೋಟ-ಗೋಳಿಯಂಗಡಿ ರಸ್ತೆಯ ಪಕ್ಕದಲ್ಲಿರುವ ಒಣಗಿದ, ರಸ್ತೆ ತಿರುವುಗಳಲ್ಲಿ ರಸ್ತೆ ವಿಸ್ತರಣೆಗೆ ಅಡಚಣೆಯಾದ ಹಾಗೂ ತೀರಾ ರಸ್ತೆಗೆ ಬಾಗಿದ ಒಟ್ಟು 73 ಮರಗಳನ್ನು ಕಡಿಯಲು ಉದ್ದೇಶಿಸಲಾಗಿದೆ.

ಈ ಎಲ್ಲಾ ಸ್ಥಳದಲ್ಲಿರುವ ಮರಗಳು ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆಯಡಿ ಬರುವುದರಿಂದ, ಕಾಯ್ದೆಯ ಪ್ರಕಾರ 50ಕ್ಕಿಂತ ಹೆಚ್ಚು ಮರ ಗಳನ್ನು ಕಡಿಯ ಬೇಕಾದಲ್ಲಿ ಸಾರ್ವಜನಿಕ ಅಹವಾಲನ್ನು ಸ್ವೀಕರಿಸಿ, ಕ್ರಮ ಕೈಗೊಳ್ಳಬೇಕಾಗಿ ರುವುದರಿಂದ ಮುಂದಿನ ಜನವರಿ 11ರಂದು ಅಪರಾಹ್ನ 3 ಗಂಟೆಗೆ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸಭೆಯನ್ನು ಏರ್ಪಡಿಸಲಾಗಿದೆ.

ಸಾರ್ವಜನಿಕರು ಈ ಸಭೆಗೆ ಹಾಜರಾಗಿ ತಮ್ಮ ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದು ಅಥವಾ ಸದ್ರಿ ಮೇಲಿನ ದಿನಾಂಕದ ಒಳಗಾಗಿ ವೃಕ್ಷ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ, ಕುಂದಾಪುರ ಇವರಿಗೆ ಲಿಖಿತ ರೂಪದಲ್ಲಿ ಅಥವಾ ಇಲಾಖೆಯ ಇ-ಮೇಲ್ -kpurforest@yahoo.com- ನಲ್ಲಿಯೂ ಸಹ ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಾರಿಗಳು ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News