ಮಣಿಪಾಲದ ಪೊಲೀಸ್ ವಸತಿಗೃಹದಲ್ಲೇ ಕಳ್ಳತನ !

Update: 2020-12-23 15:40 GMT

ಮಣಿಪಾಲ, ಡಿ.23: ಮಣಿಪಾಲದ ಪೊಲೀಸ್ ವಸತಿಗೃಹಕ್ಕೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಡಿ.20ರ ಬೆಳಗ್ಗೆ 10.30ರಿಂದ ಡಿ.22ರ ರಾತ್ರಿ 8.30ರ ಮಧ್ಯಾವಧಿಯಲ್ಲಿ ಮಣಿಪಾಲ ಪೊಲೀಸ್ ವಸತಿ ಗೃಹದ 9ನೆ ಬ್ಲಾಕ್‌ನಲ್ಲಿ ವಾಸವಾಗಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿ ಸುರೇಂದ್ರ ಬೋವಿ ಎಂಬವರ ಮನೆಯ ಬಾಗಿಲಿನ ಚೀಲಕವನ್ನು ಮುರಿದು ಒಳನುಗ್ಗಿದ ಕಳ್ಳರು, ಬೆಡ್ ರೂಮ್‌ನ ಗೊದ್ರೇಜ್ ಕಾಪಾಟಿನಲ್ಲಿಟ್ಟಿದ್ದ 24,200 ರೂ. ಮೌಲ್ಯದ ಸೊತ್ತು ಗಳನ್ನು ಕಳವು ಮಾಡಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದೇ ರೀತಿ 2017ರ ಜನವರಿಯಲ್ಲೂ ಇಲ್ಲಿನ ಪೊಲೀಸ್ ವಸತಿ ಗೃಹದ ಆರನೆ ಬ್ಲಾಕ್‌ನಲ್ಲಿರುವ ಎರಡು ಮನೆಗಳಿಗೆ ಮತ್ತು ಫ್ರೆಬವರಿಯಲ್ಲಿ ನಾಲ್ಕು ಮತ್ತು ಐದನೆ ಬ್ಲಾಕ್‌ನಲ್ಲಿರುವ ಎರಡು ಮನೆಗಳಿಗೆ ಕಳ್ಳರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News