ಡಿ.26ರಂದು ಅನುಪಮ ಮಹಿಳಾ ಮಾಸಿಕದ 20ನೇ ವರ್ಷಾಚರಣೆ

Update: 2020-12-25 11:01 GMT

 ಮಂಗಳೂರು, ಡಿ.25: ಅನುಪಮ ಮಹಿಳಾ ಮಾಸಿಕದ 20ನೇ ವರ್ಷಾಚರಣೆ, ವಾರ್ಷಿಕ ವಿಶೇಷಾಂಕ ಬಿಡುಗಡೆ ಸಮಾರಂಭ ಮತ್ತು ಸನ್ಮಾನ ಕಾರ್ಯಕ್ರಮ ಡಿ.26ರಂದು ಅಪರಾಹ್ನ 2:30ಕ್ಕೆ ನಗರದ ರಾವ್ ಆ್ಯಂಡ್ ರಾವ್ ವೃತ್ತದ ಬಳಿ ಇರುವ ಸಹಕಾರಿ ಸದನದ ಮೂರನೇ ಮಹಡಿಯಲ್ಲಿರುವ ಶಾಂತಿ ಪ್ರಕಾಶನ ಸಭಾಂಗಣದಲ್ಲಿ ನಡೆಯಲಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅನುಪಮ ಮಹಿಳಾ ಮಾಸಿಕದ ಪ್ರಧಾನ ಸಂಪಾದಕಿ ಶಹನಾಝ್ ಎಂ., ವಿಜಯ ಟೈಮ್ಸ್‌ನ ಪ್ರಧಾನ ಸಂಪಾದಕಿ ವಿಜಯಲಕ್ಷ್ಮೀ ಶಿಬರೂರು ವಿಶೇಷಾಂಕ ಬಿಡುಗಡೆ ಮಾಡಲಿದ್ದಾರೆ. ಕರಾವಳಿ ವಾಚಕಿಯರ ಮತ್ತು ಲೇಖಕಿಯರ ಸಂಘದ ಕಾರ್ಯದರ್ಶಿ ಸುಖಾಲಾಕ್ಷಿ ವೈ. ಸುವರ್ಣ, ಮುಸ್ಲಿಮ್ ಮಹಿಳಾ ಸಾಹಿತ್ಯ ಸಂಘದ ಅಧ್ಯಕ್ಷೆ ಸಮೀನಾ ಅ್ಯಾನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

 ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಜ್ಯೂಲಿಯೆಟ್ ಪಿಂಟೊ, ಆರೋಗ್ಯ ಕ್ಷೇತ್ರದಲ್ಲಿ ಸಾಧನೆಗೈದ ಭವ್ಯ ಹಾಗೂ ಸಮಾಜ ಸೇವೆಯಲ್ಲಿ ಹಲವಾರು ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡಿರುವ ಆಯಿಶಾ ಮುಮ್ತಾಝ್‌ರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅನುಪಮ ಮಾಸ ಪತ್ರಿಕೆಯ ಸಹ ಸಂಪಾದಕಿ ಸಬೀಹಾ ಾತಿಮಾ, ಸಹ ಸಂಪಾದಕಿ ಸಮೀನಾ ಉಪ್ಪಿನಂಗಡಿ, ಕುಲ್ಸೂಮ್ ಅಬೂಬಕರ್, ಶಹೀದಾ ಉಮರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News