ಕೊರೋನ ಸೋಂಕಿತರಿಗೆ ಪ್ರತ್ಯೇಕ ಮತದಾನಕ್ಕೆ ಅವಕಾಶ: ಡಿಸಿ ಜಗದೀಶ್

Update: 2020-12-26 14:26 GMT

ಕಾಪು, ಡಿ.26: ಎರಡನೇ ಹಂತದ ಗ್ರಾಪಂಗಳ ಚುನಾವಣೆಗೆ ಸಕಲ ಸಿದ್ದತೆ ಮಾಡಲಾಗಿದೆ. ಕೋವಿಡ್ ರೋಗಿಗಳಿಗೆ ಸಂಜೆ 4 ಗಂಟೆ ನಂತರ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಕರೊನಾಕ್ಕೆ ತುತ್ತಾಗಿರುವ ಮತದಾರ, ಅಭ್ಯರ್ಥಿ ಗಳಿದ್ದಲ್ಲಿ ಮಾಹಿತಿ ಸಂಗ್ರಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸ ಲಾಗಿದೆ. ನಾಳೆ ಆರೋಗ್ಯಾಧಿಕಾರಿಗೆ ಮಾಹಿತಿ ನೀಡಿದಲ್ಲಿ ಪ್ರತ್ಯೇಕ ಮತದಾನಕ್ಕೆ ಅವಕಾಶ ಮಾಡಿಕೊಡಲಾ ಗುವುದೆಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಕಾಪು ತಾಲೂಕಿನ ದಂಡತೀರ್ಥ ಪದವಿ ಪೂರ್ವ ಕಾಲೇಜಿನಲ್ಲಿರುವ ಮಸ್ಟರಿಂಗ್ ಕೇಂದ್ರಕ್ಕೆ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು. ಕರೊನಾ ಭಯ ಮುಕ್ತವಾಗಿ ಜನ ಮತದಾನದಲ್ಲಿ ಭಾಗವಹಿಸಬೇಕು. ಮತಗಟ್ಟೆ ಸಿಬ್ಬಂದಿ ಹಾಗೂ ಮತ ದಾರರು ಕರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.

ಉಡುಪಿ ಜಿಲ್ಲೆಯ ಮೊದಲ ಹಂತದ ಚುನಾವಣೆಯಲ್ಲಿ ಉದ್ಯಾವರ ಮತಗಟ್ಟೆಯಲ್ಲಿ ಮತಪತ್ರದಲ್ಲಿ ಗುರುತು ಚಿಹ್ನೆ ಮುದ್ರಣ ದೋಷದ ವಿಚಾರ ಗಮನಕ್ಕೆ ಬಂದಿದೆ. ಎರಡನೇ ಹಂತದ ಮತದಾನಕ್ಕೆ ಮೊದಲು ಮಸ್ಟರಿಂಗ್ ಕೇಂದ್ರದಲ್ಲಿಯೇ ಮತಪತ್ರಗಳನ್ನು ಸರಿಯಾಗಿ ಪರಿಶೀಲಿಸಿ ಮತ ಗಟ್ಟೆಗೆ ಕಳುಹಿ ಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ಒಂದು ವೇಳೆ ಮತದಾನ ಸಂದಭರ್ದಲ್ಲಿ ಅಂತಹ ಲೋಪಗಳು ಕಂಡು ಬಂದಲ್ಲಿ ಅದನ್ನು ಪರಿಹರಿಸಲು ಮುದ್ರಣ ತಂಡವೊಂದನ್ನು ಈಗಾಗಲೇ ಸಜ್ಜಾಗಿ ಇರಿಸಲಾಗಿದೆ. ಜಿಲ್ಲೆಯ 7 ತಾಲೂಕು ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಆಯಾ ತಾಲೂಕು ವ್ಯಾಪ್ತಿಯ ಗ್ರಾಪಂಗಳ ಮತ ಎಣಿಕೆ ನಡೆಯ ಲಿದ್ದು, ಭದ್ರತಾ ಕೊಠಡಿಗಳನ್ನೂ ಸಿದ್ದ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಚುನಾವಣಾ ವೀಕ್ಷಕ ದಿನೇಶ್ ಕುಮಾರ್, ನೋಡೆಲ್ ಅಧಿಕಾರಿ ಮಹಮ್ಮದ್ ಇಸಾಕ್, ತಹಶೀಲ್ದಾರ್ ರಶ್ಮಿ, ಕಂದಾಯ ನಿರೀಕ್ಷಕ ಸುಧೀರ್ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News