ಉಡುಪಿ: 17 ಕಲಾವಿದರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ

Update: 2020-12-26 14:30 GMT

ಉಡುಪಿ, ಡಿ.26: ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆ ಹಿರಿಯ ಸಾಧಕರ ಸ್ಮರಣಾರ್ಥ ಹಾಗೂ ಗೌರವಾರ್ಥ ನೀಡುವ 17 ವಾರ್ಷಿಕ ಪ್ರಶಸ್ತಿ ಗಳನ್ನು ಉಡುಪಿ ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಶನಿವಾರ ಸಂಜೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಸಮಾ ರಂಭದಲ್ಲಿ ಕರಾವಳಿಯ 17 ಮಂದಿ ತೆಂಕು ಮತ್ತು ಬಡಗುತಿಟ್ಟು ಹಿರಿಯ ಕಲಾವಿದರಿಗೆ ಪ್ರದಾನ ಮಾಡಲಾಯಿತು.

ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಬದುಕಿನಲ್ಲಿ ವೃತ್ತಿಯನ್ನು ಭಗವಂತನ ಪೂಜೆ ಎಂಬ ಮನೋಭಾವದಲ್ಲಿ ನಡೆಸಿದರೆ ಅದು ದೇವರ ಪೂಜೆಗೆ ಸಮನಾಗಿರುತ್ತದೆ. ಇದರಿಂದ ಯಾವುದೇ ಜಂಜಾಟವಿಲ್ಲದೇ ಸ್ವತ್ಯ ಸಮಾಜ ನಿರ್ಮಾಣ ಸಾಧ್ಯ ಎಂದರು.

ಪರ್ಯಾಯ ಅದಮಾರು ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಕರ್ತವ್ಯದಲ್ಲಿ ಮಾಡಿದ ಕೆಲಸಕ್ಕೆ ಫಲ ನಿರೀಕ್ಷೆ ಬೇಡ. ಕಲಾರಂಗ ಪೇಜಾವರ ಶ್ರೀವಿಶ್ವೇಶತೀರ್ಥರ ಆದರ್ಶವನ್ನು ಮುಂದುವರಿಸಿ ಕಲಾವಿದರ ಪೋಷಣೆ ಮಾಡುತ್ತಿದೆ ಎಂದರು.

ಪ್ರಶಸ್ತಿ ವಿಜೇತರು: ತೆಂಕು ಹಾಗೂ ಬಡಗುತಿಟ್ಟುಗಳ ಹಿರಿಯ ಕಲಾವಿದರಾದ ಅನಂತ ಕುಲಾಲ ಕಕ್ಕುಂಜೆ, ಮಹಾಬಲ ನಾಕ್ ಬುಕ್ಕಿಗುಡ್ಡೆ, ರಾಮಕೃಷ್ಣ ಶೆಟ್ಟಿಗಾರ್ ಮಿಜಾರು, ಬಾಬು ಕುಲಾಲ ಹಳ್ಳಾಡಿ, ನಗ್ರಿ ಮಹಾಬಲ ರೈ, ಪ್ರಭಾಕರ ಹೆಗಡೆ ಚಿಟ್ಟಾಣಿ ಹೊನ್ನಾವರ, ರಾಮಕೃಷ್ಣ ಮಂದಾರ್ತಿ, ಮಂಜುನಾಥ ಭಟ್ ಬೆಳ್ಳಾರೆ, ತಿಮ್ಮಪ್ಪ ಹೆಗಡೆ ಶಿರಳಗಿ ಸಿದ್ದಾಪುರ, ಬಸವರಾಜ್ ಹುಣ್ಸೆಮಕ್ಕಿ, ರಾಮಚಂದ್ರ ಹೆಗಡೆ ಮೂರೂರು, ರಘುರಾಮ ಗೌಡ ಕೇಂಜ, ದಿನೇಶ ಅಮ್ಮಣ್ಣಾಯ ಅರಸಿನಮಕ್ಕಿ, ಉಮೇಶ ಹೆಬ್ಬಾರ್ ನಿಡ್ಲೆ, ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಮಹಾದೇವ ಪಟಗಾರ ಕುಮಟಾ, ರಾಘವದಾಸ್ ಮುಡಿಪು ಇವರನ್ನು ಸನ್ಮಾನಿಸಲಾಯಿತು.

ವಿದ್ಯಾಪೋಷಕ್ ಕೋಶಾಧಿಕಾರಿ ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಸದಾಶಿವ ರಾವ್ ಅವರಿಗೆ ಯಕ್ಷ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ‘ಮಾರ್ವಿ ಕಲಾವಿದರು’ ಎಂಬ ಕೃತಿಯನ್ನು ಉಭಯ ಶ್ರೀಪಾದರು ಬಿಡುಗಡೆಗೊಳಿಸಿದರು.

ಶಾಸಕ ರಘುಪತಿ ಭಟ್, ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಎಸ್‌ವಿ ಭಟ್, ನಾರಾಯಣ ಹೆಗ್ಡೆ, ವಿ.ಜಿ. ಶೆಟ್ಟಿ, ಗಣೇಶ್ ರಾವ್ ಉಪಸ್ಥಿತರಿದ್ದರು.

ಶಾಸಕ ರಘುಪತಿ ಟ್,ಸಂಸ್ಥೆಯಅ್ಯಕ್ಷ ಎಂ. ಗಂಗಾರರಾವ್,ಕಾರ್ಯದರ್ಶಿಮುರಲಿಕಡೆಕಾರ್,ಎಸ್‌ವಿಟ್, ನಾರಾಯಣ ಹೆಗ್ಡೆ, ವಿ.ಜಿ. ಶೆಟ್ಟಿ, ಗಣೇಶ್ ರಾವ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News