ಸುಳ್ಯ: ಮೊದಲ ಎರಡು ಗಂಟೆಯಲ್ಲಿ ಶೇ.13.81 ಮತದಾನ

Update: 2020-12-27 04:56 GMT
ಶಾಸಕ ಎಸ್.ಅಂಗಾರ ಅಮರಮುಡ್ನೂರು ಗ್ರಾಪಂನ 3ನೇ ವಾರ್ಡ್ ದೊಡ್ಡತೋಟ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. 

ಸುಳ್ಯ, ಡಿ.27: ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮೊದಲ ಎರಡು ಗಂಟೆಯಲ್ಲಿ ಸುಳ್ಯ ತಾಲೂಕಿನಲ್ಲಿ ಶೇ.13.81 ಮತದಾನ ದಾಖಲಾಗಿದೆ.

ಒಂಭತ್ತು ಗಂಟೆಯ ವೇಳೆಗೆ 7,107 ಪುರುಷ ಮತದಾರರು ಮತ್ತು 5529 ಮಹಿಳಾ ಮತದಾರರು ಸೇರಿ 12,336 ಮತದಾರರು ಮತ ಚಲಾಯಿಸಿದ್ದಾರೆ. ಮತಗಟ್ಟೆಗಳಲ್ಲಿ ಬೆಳಗ್ಗೆ ಕೆಲವೆಡೆ ಬಿರುಸಿನ ಮತದಾನ ನಡೆದಿದ್ದು ಉದ್ದದ ಸರತಿ ಸಾಲು ಕಂಡು ಬಂದಿತ್ತು. ಆದರೆ ಬಹುತೇಕ ಕಡೆಗಳಲ್ಲಿ ಸಾವಧಾನವಾಗಿ ಮತದಾನ ಮುಂದುವರಿದಿದೆ.

ಶಾಸಕ ಎಸ್.ಅಂಗಾರ ಅವರು ಅಮರಮುಡ್ನೂರು ಗ್ರಾಮ ಪಂಚಾಯತ್ ನ ಮೂರನೇ ವಾರ್ಡ್ ದೊಡ್ಡತೋಟ ಮತಗಟ್ಟೆಯಲ್ಲಿ ಬೆಳಗ್ಗೆ 7 ಗಂಟೆಗೆ ಮತ ಚಲಾಯಿಸಿದರು. ಕುಟುಂಬ ಸಮೇತರಾಗಿ ಆಗಮಿಸಿ ಶಾಸಕರು ಮತದಾನ ಮಾಡಿದರು.

ಒಂದು ಸಾವಿರ ಮತದಾರರಿಗಿಂತ ಹೆಚ್ಚು ಮತದಾರರು ಇರುವ ಮತಗಟ್ಟೆಗಳನ್ನು ವಿಭಜಿಸಿ 27 ಹೆಚ್ಚುವರಿ ಮತಗಟ್ಟೆ ಸ್ಥಾಪಿಸಿದ ಕಾರಣ ಎಲ್ಲೂ ಮತದಾರರ ಉದ್ದದ ಸಾಲು ಕಂಡು ಬರುತ್ತಿಲ್ಲ. ಎಲ್ಲೆಡೆ ಶಾಂತಿಯುತ ಮತದಾನ ನಡೆಯುತಿದೆ. ಕೋವಿಡ್ ಮಾರ್ಗ ಸೂಚಿಗಳನ್ನು ಪಾಲಿಸಿಕೊಂಡು ಮತದಾನ ನಡೆಯುತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News