ಕೆ.ಸಿ.ರೋಡ್ : ಎಸ್.ವೈ.ಎಸ್ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ

Update: 2020-12-27 12:23 GMT

ಉಳ್ಳಾಲ : ಆರ್ಥಿಕ ಸಂಕಷ್ಟ ದಿಂದ  ವಿವಾಹ ಆಗದೆ ಇರುವ ಯುವತಿಯರನ್ನು ಗುರುತಿಸಿ ಅವರಿಗೆ ವಿವಾಹ ಆಗಲು ವ್ಯವಸ್ಥೆ ಒದಗಿಸಿ ಕೊಡುವುದು ಸಂಘಟಕರ ಕರ್ತವ್ಯ ಕೂಡ ಆಗಿದೆ. ಆ ಕೆಲಸವನ್ನು ಎಸ್ ವೈ ಎಸ್ ಕೆ.ಸಿ.ರೋಡ್ ಸೆಂಟರ್ ನೆರವೇರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಉಡುಪಿ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಹೇಳಿದರು.

ಅವರು ಎಸ್ ವೈ ಎಸ್ ಕೆ.ಸಿ.ರೋಡ್ ಸೆಂಟರ್ ವತಿಯಿಂದ ಕೋಟೆಕಾರ್ ಹಾಲ್ ನಲ್ಲಿ ನಡೆದ ಸ್ವಾಂತನ ಪ್ರಯುಕ್ತ 9 ನೇ ವರ್ಷದ ಐದು ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ಹುಸೈನ್ ಸಅದಿ ಕೆಸಿರೋಡ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ  ಚಾರ್ಮಾಡಿ ಮೊಯ್ದಿನ್ ಕುಂಞಿ ಯವರ ಪುತ್ರಿ ರಮ್ಲತ್ ಎಂಬ ವಧುವನ್ನು ಕಕ್ಕಿಂಜೆ ನಿವಾಸಿ ಉಸ್ಮಾನ್ ಬ್ಯಾರಿ ಪುತ್ರ ತಮೀಮ್ ಎಂಬ ವರನಿಗೆ, ಬೆಳ್ತಂಗಡಿ ತಾಲೂಕಿನ ನಾವೂರು ಹುಸೈನ್ ರವರ ಪುತ್ರಿ ನಾಸೀರ ಬಾನು ರನ್ನು ಬೆಂಗ್ರೆ ಅಬ್ದುಲ್ ಬಶೀರ್ ಅವರು ಪುತ್ರ ಮುಹಮ್ಮದ್ ಸಿನಾನ್ , ಬೆಳ್ತಂಗಡಿ ಅಬ್ದುಲ್ ಅಝೀಝ್ ರವರ ಪುತ್ರಿ ಫೌಝಿಯಾ ರನ್ನು ಚಿಕ್ಕ ಮಗಳೂರು ನಿವಾಸಿ ಸುಲೈಮಾನ್ ಪುತ್ರ ಲತೀಫ್ ಅಹ್ಮದ್, ಬೆಳ್ತಂಗಡಿ ಪಣಕಜೆ ನಿವಾಸಿ ಮುಸ್ತಫಾ ರವರ ಪುತ್ರಿ ಸಾಜಿದಾ ರನ್ನು ಬೆಳ್ತಂಗಡಿ ಕುವೆಟ್ಟು ನಿವಾಸಿ ಅಬ್ದುಲ್ಲಾ ರವರ ಪುತ್ರ ಮುಹಮ್ಮದ್ ಅನ್ಸಾರ್, ನೆಲ್ಯಾಡಿ ನಿವಾಸಿ ಇಬ್ರಾಹಿಂ ಪುತ್ರಿ ಸಬೀನಾರನ್ನು ಹಾಸನದ ಅತ್ತಾವುಲ್ಲರ ಪುತ್ರ ಸಮೀವುಲ್ಲಾ ರಿಗೆ ನಿಖಾಹ್ ನೆರವೇರಿಸಿ ವಿವಾಹ ಮಾಡಿ ಕೊಡಲಾಯಿತು.

ಉಡುಪಿ ಖಾಝಿ ಅಬ್ದುಲ್ ಹಮೀದ್  ಮುಸ್ಲಿಯಾರ್ ಮಾಣಿ ನಿಖಾಹ್ ನೆರವೇರಿಸಿ ಕೊಟ್ಟರು. ಕಾರ್ಯಕ್ರಮ ದಲ್ಲಿ ಮುಹಮ್ಮದ್ ಅಲಿ ಸಖಾಫಿ ಸುರಿಬೈಲ್ , ಉಸ್ಮಾನ್ ಸಅದಿ ಪಟ್ಟೋರಿ, ಖಲೀಲ್ ಮುಸ್ಲಿಯಾರ್, ಇಬ್ರಾಹಿಂ ಫೈಝಿ, ಯು.ಬಿ.ಮಹಮ್ಮದ್ ಕೆಸಿರೋಡ್,  ಇಸ್ಮಾಯಿಲ್ ಹಾಜಿ ಕೊಪ್ಪಳ, ಬಾವಾ ಹಾಜಿ ಪಿಲಿಕೂರು, ಅಬ್ಬಾಸ್ ಹಾಜಿ ಕೊಮರಂಗಳ, ಮೂಸಾ ಹಾಜಿ ಮುನ್ನೂರು, ಮುನೀರ್ ಸಖಾಫಿ ಕೆಸಿರೋಡ್, ಅಝೀಝ್ ಸಖಾಫಿ, ಎಂ.ಪಿ.ಮಹಮ್ಮದ್, ಅಬ್ದುಲ್ ಖಾದರ್ ಮಕ್ಯಾರ್  ಮೊದಲಾದವರು ಉಪಸ್ಥಿತರಿದ್ದರು

ಎಸ್ ವೈ ಎಸ್ ಕೆಸಿರೋಡ್ ಮ್ಯಾರೇಜ್ ಸೆಲ್ ಕನ್ವಿನರ್ ಉಮ್ಮರ್ ಮಾಸ್ಟರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News