ದ.ಕ.ಜಿಲ್ಲೆ : 1,04,769 ಮಂದಿ ಮತದಾನದಿಂದ ದೂರ
ಮಂಗಳೂರು, ಡಿ.28: ದ.ಕ.ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬ ತಾಲೂಕಿನ 114 ಗ್ರಾಪಂಗೆ ರವಿವಾರ ನಡೆದ ಚುನಾವಣೆಯಲ್ಲಿ 1,04,769 ಮಂದಿ ಮತದಾನದಿಂದ ದೂರ ಉಳಿದಿದ್ದಾರೆ. ಬೆಳ್ತಂಗಡಿಯ 2,03,764 ಮತದಾರರ ಪೈಕಿ 1,59,838 ಮಂದಿ ಮತ ಚಲಾಯಿಸಿದರೆ, ಪುತ್ತೂರಿನ 1,07,491 ಮತದಾರರ ಪೈಕಿ 84,469 ಮಂದಿ ಮತ ಚಲಾಯಿಸಿದ್ದಾರೆ. ಸುಳ್ಯದ 89,911 ಮತದಾರರ ಪೈಕಿ 71,934 ಮಂದಿ ಚಲಾಯಿಸಿದರೆ, ಕಡಬದ 91,310 ಮತದಾರರ ಪೈಕಿ 70,866 ಮಂದಿ ಚಲಾಯಿಸಿದ್ದಾರೆ. ಒಟ್ಟರ 4,91,876 ಮತದಾರರ ಪೈಕಿ 3,87,107 ಮಂದಿ ಮತಚಲಾಯಿಸುವ ಮೂಲಕ 1,04,769 ಮಂದಿ ಮತದಾನದಿಂದ ದೂರ ಉಳಿದಿದ್ದಾರೆ.
ಬೆಳ್ತಂಗಡಿಯಲ್ಲಿ ಶೇ.78.44, ಪುತ್ತೂರಿನಲ್ಲಿ ಶೇ.78.58, ಸುಳ್ಯದಲ್ಲಿ ಶೇ.80.54, ಕಡಬದಲ್ಲಿ ಶೇ.77.61 ಸಹಿತ ಜಿಲ್ಲೆಯಲ್ಲಿ ಒಟ್ಟು ಶೇ.78.70 ಮತದಾನವಾಗಿದೆ.
ಡಿ.22ರಂದು ಮೊದಲ ಹಂತದಲ್ಲಿ ಮಂಗಳೂರು, ಬಂಟ್ವಾಳ, ಮೂಡುಬಿದಿರೆ ತಾಲೂಕಿನ 106 ಗ್ರಾಪಂಗೆ ನಡೆದ ಚುನಾವಣೆಯಲ್ಲಿ 1,43,247 ಮಂದಿ ಮತದಾನದಿಂದ ದೂರ ಉಳಿದಿದ್ದರು. ಅಂದರೆ ಒಟ್ಟು 5,60,231 ಮತದಾರರ ಪೈಕಿ 4,16,984 ಮಂದಿ ಮತದಾನಗೈದಿದ್ದರು. ಅಲ್ಲದೆ ಶೇ.74.43 ಮತದಾನವಾಗಿತ್ತು.