ಸರಯೂ ಸಪ್ತಾಹದ ತುಳುವೆರೆ ಏಳಾಟೊ ಉದ್ಘಾಟನೆ

Update: 2020-12-28 14:23 GMT

ಮಂಗಳೂರು, ಡಿ. 28: ಯಕ್ಷಗಾನವು ಸರ್ವಸಂಸ್ಕಾರವನ್ನು ಕಲಿಸುವ ಭಾರತೀಯ ಶ್ರೇಷ್ಠ ಕಲೆಯಾಗಿದೆ. ಸರಯೂ ತಂಡವು ಇಪ್ಪತ್ತು ವರ್ಷಗಳಿಂದ ಈ ಜಾಗೃತಿಯನ್ನು ಎಳೆಯ ಮಕ್ಕಳಿಗೆ ಭಿತ್ತಿ ಅವರಲ್ಲಿ ಈ ಕಲೆಯ ಸಂವಹನ ಮಾಡುತ್ತಾ ಬರುತ್ತಿದೆ. ಅಲ್ಲದೆ ಸಮಾಜದ ಆಢ್ಯರನ್ನು ಗುರುತಿಸುತ್ತಾ, ಗೌರವಿಸುತ್ತಾ ಸನ್ಮಾನಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ತುಳು ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಹೇಳಿದರು.

ನಗರದ ತುಳು ಚಾವಡಿಯಲ್ಲಿ ನಡೆದ ಸರಯೂ ಸಪ್ತಾಹದ ತುಳುವೆರೆ ಏಳಾಟೊವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ತಜ್ಞ ಡಾ.ಶ್ರೀಪತಿ ರಾವ್ ಡಿ., ಶ್ರೀ ಗುರುವನ ದುಗಾ ಕ್ಷೇತ್ರದ ಪ್ರಧಾನ ಅಚಕ ಕಡೆಕಾರು ವೆಂಕಟರಾಜ ಕಾರಂತ ಕುಕ್ಕಾಜೆ ಅವರನ್ನು ಸನ್ಮಾನಿಸ ಲಾಯಿತು. ಯಕ್ಷಗಾನ ಅಕಾಡಮಿಯ ಸದಸ್ಯ ಕದ್ರಿ ನವನೀತ್ ಶೆಟ್ಟಿ, ಇಷುದಿ ಜಂಬೂಸವಾರಿ ಪತ್ರಿಕೆಯ ಸಂಪಾದಕ ಶರತ್ ಕುಮಾರ್ ಭಟ್, ಕಲಾವಿದರಾದ ಸಂಜಯಕುಮಾರ್ ಶೆಟ್ಟಿ ಗೋಣಿಬೀಡು, ಸೀತಾರಾಮ್ ಕುಮಾರ್ ಕಟೀಲ್, ಮನಪಾ ಸದಸ್ಯ ಮನೋಜ್ ಕುಮಾರ್, ಗೌರವ ಸಂಚಾಲಕ ಹರಿಕೃಷ್ಣ ಪುನರೂರು ಉಪಸ್ಥಿತರಿದ್ದರು.

ನಿವೃತ್ತ ಅಧ್ಯಾಪಕ ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು. ಸಂಜೀವ ಕಜೆಪದವು ಪ್ರಾರ್ಥನೆಗೈದರು. ಮಾಧವ ನಾವಡರು, ಡಾ.ದಿನೇಶ್ ನಾಯಕ್, ಶಾಂತಾ ಆರ್. ಎರ್ಮಾಳ್ ಸನ್ಮಾನ ಪತ್ರ ವಾಚಿಸಿದರು. ತುಳು ಅಕಾಡಮಿಯ ಸದಸ್ಯ ಚೇತಕ್ ಪೂಜಾರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News