ಬಜ್ಪೆ ವಿಮಾನ ನಿಲ್ದಾಣ ಬಳಿ ಆಟಿಕೆ ಹೆಲಿಕಾಪ್ಟರ್ ಪತ್ತೆ

Update: 2020-12-28 16:33 GMT

ಮಂಗಳೂರು, ಡಿ.28: ಬಜ್ಪೆಯಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ಹಳೆಯ ವಿಮಾನ ನಿಲ್ದಾಣ ಆವರಣದ ಬಳಿ ಶನಿವಾರ ರಾತ್ರಿ ಮಿನುಗುವ ವಸ್ತುವೊಂದು ಪತ್ತೆಯಾಗಿ ಭದ್ರತಾ ಸಿಬಂದಿ ಹೈ ಅಲರ್ಟ್ ಆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಿನುಗುವ ಈ ವಸ್ತುವನ್ನು ಪರಿಶೀಲಿಸಿದಾಗ ಅದು ಆಟಿಕೆಯ ಹೆಲಿಕಾಪ್ಟರ್ ಎಂದು ಗೊತ್ತಾಗಿರುವುದಾಗಿ ಮೂಲಗಳು ತಿಳಿಸಿವೆ. ಆವರಣದ ಹೊರಭಾಗದ ಮನೆಗಳ ಯಾವುದೋ ಮಕ್ಕಳು ರಿಮೋಟ್ ಕಂಟ್ರೋಲ್ನ ಆಟಿಕೆ ಹೆಲಿಕಾಪ್ಟರ್ ಹಾರಿಸಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News