ಉಡುಪಿ: ಮತ ಎಣಿಕೆ ಕೇಂದ್ರದ ಬಳಿ ವಾಹನ ಸಂಚಾರ ನಿಷೇಧ
Update: 2020-12-29 13:54 GMT
ಉಡುಪಿ, ಡಿ.29: ಜಿಲ್ಲೆಯಲ್ಲಿ ಡಿ.30ರಂದು ನಡೆಯುವ ಗ್ರಾಮ ಪಂಚಾ ಯತ್ ಚುನಾವಣಾ ಮತ ಎಣಿಕೆ ಕೇಂದ್ರದ ಬಳಿ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.
ಬೈಂದೂರು ತಾಲೂಕಿನ ಮತ ಎಣಿಕಾ ಕೇಂದ್ರ ಆಗಿರುವ ಬೈಂದೂರು ಜೂನಿಯರ್ ಕಾಲೇಜಿನ ಎದುರುಗಡೆ ಇರುವ ರಸ್ತೆಯನ್ನು, ಮಾಸ್ತಿಕಟ್ಟೆ ಜಂಕ್ಷನ್‌ನಿಂದ ನಮ್ಮ ಬಜಾರ್‌ವರೆಗೆ ಹಾಗೂ ಸರಕಾರಿ ಆಸ್ಪತ್ರೆ ಜಂಕ್ಷನ್‌ನಿಂದ ಜಯಾನಂದ ಹೋಬಳಿದಾರ್‌ರವರ ಮನೆಯವರೆಗಿನ ರಸ್ತೆಯಲ್ಲಿ ಹಾಗೂ ಉಡುಪಿ ತಾಲೂಕಿನ ಮತ ಎಣಿಕಾ ಕೇಂದ್ರ ಆಗಿರುವ ಸೈಂಟ್ ಸಿಸಿಲೀಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸುತ್ತ ಇರುವ ಕಾನ್ವೆಂಟ್ ರಸ್ತೆ, ಲಾಲ್ ಬಹದ್ದೂರ್ ಶಾಸ್ತ್ರಿ ರಸ್ತೆ ಹಾಗೂ ಬ್ರಹ್ಮ ಕುಮಾರೀಸ್ ರಸ್ತೆ(ಸಿಎಂಸಿ ರಸ್ತೆ) ಗಳಲ್ಲಿ ಸಂಪೂರ್ಣ ವಾಹನ ಸಂಚಾರ ನಿಷೇಧಿಸಿರುವು ದಾಗಿ ಆದೇಶದಲ್ಲಿ ತಿಳಿಸಲಾಗಿದೆ.