'ಉದ್ಯಾವರ -9' ಕ್ಷೇತ್ರದಲ್ಲಿ ಇಬ್ಬರಿಗೆ ಸಮಾನ ಮತ : ಟಾಸ್ ಮೂಲಕ ಅಭ್ಯರ್ಥಿಯ ಆಯ್ಕೆ

Update: 2020-12-30 12:00 GMT
ಲಾರೆನ್ಸ್

ಉಡುಪಿ, ಡಿ. 30: ಉದ್ಯಾವರ ಗ್ರಾಮ ಪಂಚಾಯತ್‌ನ ಉದ್ಯಾವರ 9ನೇ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳ ಫಲಿತಾಂಶ ಟೈ ಆದ ಕಾರಣ ಒಬ್ಬರನ್ನು ಟಾಸ್ ಮೂಲಕ ಆಯ್ಕೆ ಮಾಡಲಾಯಿತು.

ಈ ಕ್ಷೇತ್ರದಲ್ಲಿ ಲಾರೆನ್ಸ್ ಡೇಸಾ(ಸಾಮಾನ್ಯ) ಮತ್ತು ಶೇಖರ್ ಕೆ.ಕೋಟ್ಯಾನ್ (ಹಿಂದುಳಿದ ವರ್ಗ- ಎ) ಸ್ಪರ್ಧಿಸಿದ್ದರು. ಇವರಿಬ್ಬರು 229 ಸಮಾನ ಮತ ಗಳನ್ನು ಪಡೆದಿದ್ದರು. ಇದರಿಂದ ಫಲಿತಾಂಶ ಟೈ ಆಗಿದ್ದು, ಈ ಹಿನ್ನೆಲೆಯಲ್ಲಿ ಟಾಸ್ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಯಿತು. ಅದರಂತೆ ಲಾರೆನ್ಸ್ ವಿಜಯಿ ಅಭ್ಯರ್ಥಿಯಾಗಿ ಮೂಡಿ ಬಂದರು. ಇವರಿಬ್ಬರು ಕೂಡ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News