ಗ್ರಾ.ಪಂ. ಚುನಾವಣೆ: ಬಾಳೆಪುಣಿ, ನರಿಂಗಾನ, ಕುರ್ನಾಡಿನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಮೇಲುಗೈ

Update: 2020-12-31 14:11 GMT

ಕೊಣಾಜೆ: ಬಾಳೆಪುಣಿ, ನರಿಂಗಾನ ಹಾಗೂ ಕುರ್ನಾಡು ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತರು ಸ್ಪಷ್ಟ ಬಹುಮತದೊಂದಿಗೆ ಅಧಿಕಾರವೇರಲಿದ್ದಾರೆ.

ಬಾಳೆಪುಣಿಯಲ್ಲಿ ಕಾಂಗ್ರೆಸ್ ಬೆಂಬಲಿತರು 20, ಬಿಜೆಪಿ ಬೆಂಬಲಿತರು 7 ಹಾಗೂ ಪಕ್ಷೇತರರು 2 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ನರಿಂಗಾನ ಗ್ರಾಮ ಪಂಚಾಯತಿಯಲ್ಲಿ 17 ಸ್ಥಾನಗಳ ಪೈಕಿ 17 ಸ್ಥಾನವನ್ನೂ ಕಾಂಗ್ರೆಸ್ ಬೆಂಬಲಿತರು ಪಡೆದುಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಕುರ್ನಾಡು ಪಂಚಾಯಿತಿಯಲ್ಲಿ ಈ ಬಾರಿ ಎಲ್ಲರ ಲೆಕ್ಕಾಚಾರವೂ ಉಲ್ಟಾ ಆಗಿದ್ದು, ಒಟ್ಟು 7 ಸ್ಥಾನಗಳ ಪೈಕಿ 4 ಕಾಂಗ್ರೆಸ್ ಹಾಗೂ 3 ಬಿಜೆಪಿ ಬೆಂಬಲಿತರು ಜಯಗಳಿಸಿದ್ದಾರೆ. ಕಳೆದ ಬಾರಿ ಕುರ್ನಾಡಿನಲ್ಲಿ‌ ಬಿಜೆಪಿ ಆರು ಸ್ಥಾನಗಳನ್ನು ಪಡೆದುಕೊಂಡು ಅಧಿಕಾರ ನಡೆಸಿತ್ತು. ಕಳೆದ‌‌‌ ಬಾರಿ‌ ಒಂದು ಸ್ಥಾನವನ್ನು ಪಡೆದಿದ್ದ ಕಾಂಗ್ರೆಸ್ ಈ ಬಾರಿ‌ ನಾಲ್ಕು ಸ್ಥಾನ ಪಡೆದು ಅಧಿಕಾರ ನಡೆಸಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News