ತೌಡುಗೋಳಿ: ಗಡಿ ಭಾಗದಲ್ಲಿ ಚಿರತೆ ಪತ್ಯಕ್ಷ; ಸ್ಥಳೀಯರಲ್ಲಿ ಆತಂಕ

Update: 2021-01-01 16:08 GMT

ಕೊಣಾಜೆ: ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮ ಹಾಗೂ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ಗಡಿ ಭಾಗ ತೌಡುಗೋಳಿ ಅಂಗನವಾಡಿ ಬಳಿಯ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಏಳು ಗಂಟೆಗೆ ಚಿರತೆಯೊಂದು ಅತ್ತಿಂದಿತ್ತ ಸಂಚರಿಸುತ್ತಿರುವುದನ್ನು ಸ್ಥಳೀಯರು ಕಂಡಿದ್ದು ಈ‌‌ ಭಾಗದ ನಾಗರಿಕರು‌ ಆತಂಕಗೊಂಡಿದ್ದಾರೆ.

ಸ್ಥಳೀಯ ಕೋಳಿ ಮಾಂಸ ಮಾರಾಟದ ಅಂಗಡಿಯವರೊಬ್ಬರು ಚಿರತೆ ಸಂಚರಿಸುತ್ತಿರುವುದನ್ನು ಗಮನಿಸಿದ್ದಾರೆ ಎನ್ನಲಾಗಿದೆ.

ಇದಕ್ಕೂ ಮುನ್ನ ಬೆಳಗ್ಗೆ ಆರೂವರೆ ಗಂಟೆ ಹೊತ್ತಿಗೆ ಅಂಗನವಾಡಿಗಿಂತ ಅರ್ಧ ಕಿ. ಮೀ. ದೂರದ ನಿಡ್ಮಾಡ್ ತಿರುವು ರಸ್ತೆಯ ತಂಗುದಾಣದ ಬಳಿ ನಿಂತಿರುವುದನ್ನು ಸ್ಕೂಟರ್ ಮೂರುಗೋಳಿಯಿಂದ ಮಂಗಳೂರಿಗೆ ನಿತ್ಯವೂ ಸ್ಕೂಟರ್ ನಲ್ಲಿ ಸಂಚರಿಸುವ ಸವಾರರೊಬ್ಬರು ಗಮನಿಸಿದ್ದು, ಚಿರತೆ ಕಂಡು ಹೆದರಿದ ಅವರು ಸ್ಕೂಟರ್ ತಿರುಗಿಸಿ ವಾಪಾಸ್ ತೌಡುಗೋಳಿ ಜಂಕ್ಚನ್ ಗೆ ಬಂದು ಮಾಹಿತಿ ನೀಡಿದ್ದು, ಕೆಲವರು ಹುಡುಕುವ ಪ್ರಯತ್ನ ಮಾಡಿದರಾದರೂ ಚಿರತೆ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News