ಬೋಳಿಯಾರು: ಕಾಂಗ್ರೆಸ್ ಕಾರ್ಯಕರ್ತನಿಗೆ ಹಲ್ಲೆ; ದೂರು
Update: 2021-01-02 09:46 GMT
ಕೊಣಾಜೆ, ಜ.2: ಕೊಣಾಜೆ ಠಾಣಾ ವ್ಯಾಪ್ತಿಯ ಬೋಳಿಯಾರ್ ಮದಕ ಎಂಬಲ್ಲಿ ಕಾಂಗ್ರೆಸ್ ಕಾರ್ಯಕರ್ತನೋರ್ವನಿಗೆ ತಂಡವೊಂದು ಶುಕ್ರವಾರ ರಾತ್ರಿ ಹಲ್ಲೆ ನಡಸಿರುವ ಬಗ್ಗೆ ದೂರು ದಾಖಲಾಗಿದೆ.
ಪಾಣೆಲ ನಿವಾಸಿ ನಾಸಿರ್ ಹಲ್ಲೆಗೊಳಗಾದವರು.
ನಾಸಿರ್ ಕಳೆದ ಗ್ರಾಪಂ ಚುನಾವಣೆಯಲ್ಲಿ ಸ್ಥಳೀಯ ವಿಜಯಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮುಹಮ್ಮದ್ ಎಂಬವರ ಪರ ಪ್ರಚಾರ ನಡೆಸಿದ್ದರೆನ್ನಲಾಗಿದೆ. ಇದೇ ವಿಚಾರವಾಗಿ ನಿನ್ನೆ ರಾತ್ರಿ ನಾಸಿರ್ ಮೆಡಿಕಲ್ ಅಂಗಡಿಯೊಂದಕ್ಕೆ ಔಷಧಿ ತೆಗೆದುಕೊಳ್ಳಲು ತೆರಳಿದ್ದ ವೇಳೆ ಬೋಳಿಯಾರ್ ಮದಕ ಜಂಕ್ಷನ್ ನಲ್ಲಿ ಎಸ್ ಡಿಪಿಐ ಕಾರ್ಯಕರ್ತರ ತಂಡ ಮರದ ಸೋಂಟೆಯಲ್ಲಿ ಹಲ್ಲೆ ನಡೆಸಿದೆ ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.
ಗಾಯಾಳು ನಾಸಿರ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.