ಉಡುಪಿ ಜಿಲ್ಲೆಯಲ್ಲಿ ಶಾಲಾ ಪುನಾರಂಭದ ಎರಡನೆ ದಿನ; ಪಿಯುಸಿ ಶೇ.58.49, ಎಸೆಸೆಲ್ಸಿ ಶೇ.71.40 ವಿದ್ಯಾರ್ಥಿಗಳು ಹಾಜರು

Update: 2021-01-02 15:30 GMT

ಉಡುಪಿ, ಜ.2: ಶಾಲೆ ಆರಂಭದ ಎರಡನೆ ದಿನವಾದ ಇಂದು ಉಡುಪಿ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿಯ ಶೇ.58.49 ಮತ್ತು ಎಸೆಸೆಲ್ಸಿಯ ಶೇ.71.40 ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ.

ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ ಎಸೆಸೆಲ್ಸಿ, ಏಳು ಮತ್ತು ಎಂಟು, ಅನು ದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಏಳು ಮತ್ತು ಎಸೆಸೆಲ್ಸಿ ತರಗತಿ ಗಳು ಮಾತ್ರ ನಡೆದವು. ಜಿಲ್ಲೆಯ ಒಟ್ಟು 14979 ಎಸೆಸೆಲ್ಸಿ ವಿದ್ಯಾರ್ಥಿಗಳ ಪೈಕಿ 10696 ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ.

ಸರಕಾರಿ ಶಾಲೆಗಳ ಒಟ್ಟು 5988 ಎಸೆಸೆಲ್ಸಿ ವಿದ್ಯಾರ್ಥಿಗಳಲ್ಲಿ 4941 ಮಕ್ಕಳು ತರಗತಿಗೆ ಆಗಮಿಸುವ ಮೂಲಕ ಅನುದಾನಿತ ಮತ್ತು ಖಾಸಗಿ ಗಿಂತ ಅತ್ಯಂತ ಹೆಚ್ಚು ಶೇ.82.5 ಹಾಜರಾತಿ ಕಂಡುಬಂದಿದೆ. ಅನುದಾನಿತದಲ್ಲಿ ಶೇ.77.5 ಮತ್ತು ಖಾಸಗಿಯಲ್ಲಿ ಶೇ.56.7 ಹಾಜರಾತಿ ದಾಖಲಾಗಿದೆ.

ಸರಕಾರಿ ಶಾಲೆಗಳ ಏಳನೇ ತರಗತಿಯಲ್ಲಿ ಶೇ.73.3, ಎಂಟನೆ ತರಗತಿ ಯಲ್ಲಿ ಶೇ.11, ಅನುದಾನಿತ ಶಾಲೆಗಳ ಏಳನೆ ತರಗತಿಯಲ್ಲಿ ಶೇ.58.7 ಮತ್ತು ಖಾಸಗಿ ಶಾಲೆಗ ಏಳನೆ ತರಗತಿಯಲ್ಲಿ ಶೇ.28.5 ಮಕ್ಕಳು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್. ನಾಗೂರ ತಿಳಿಸಿದ್ದಾರೆ.

ಬ್ರಹ್ಮಾವರ ತಾಲೂಕಿನ ಕರ್ಜೆ ಸರಕಾರಿ ಪ್ರೌಢ ಶಾಲೆಗೆ ಇಂದು ಭೇಟಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್. ನಾಗೂರ ಎಸೆಸೆಲ್ಸಿ ಮಕ್ಕಳ ಜೊತೆ ವಿಚಾರ ವಿನಿಯಮ ಮಾಡಿಕೊಂಡರು. 120 ದಿನಗಳಲ್ಲಿ ಉತ್ತಮ ಕಲಿಕೆ ಮಾಡಲು ನಿರಂತರ ಅಧ್ಯಯನ ವನ್ನು ಅತ್ಯಂತ ಆಸಕ್ತಿಯಿಂದ ಮಾಡುವಂತೆ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಜಿಲ್ಲೆಯ ಒಟ್ಟು 14346(7054 ಬಾಲಕರು, 7423 ಬಾಲಕಿಯರು) ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಲ್ಲಿ ಇಂದು 8392(3826 ಬಾಲಕರು, 4566 ಬಾಲಕಿಯರು) ವಿದ್ಯಾರ್ಥಿಗಳು ತರಗತಿ ಹಾಜರಾಗಿದ್ದರು. ಕಲಾ ವಿಭಾಗದಲ್ಲಿ 851, ವಾಣಿಜ್ಯ ವಿಭಾಗದಲ್ಲಿ 4352, ವಿಜ್ಞಾನ ವಿಭಾಗ ದಲ್ಲಿ 3155 ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News