ಅಸಮರ್ಪಕವಾಗಿ ಉಳಿದ ರಸ್ತೆಯನ್ನು ಶೀಘ್ರ ದುರಸ್ತಿಗೊಳಿಸಲು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹ

Update: 2021-01-02 15:44 GMT

ಮಂಗಳೂರು, ಜ. 2: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ, ಪಾಂಡೇಶ್ವರಕಟ್ಟೆಯಿಂದ ಪೈ ಸೇಲ್ಸ್ ಕಾರ್ಪೊರೇಷನ್ ವರೆಗಿನ ರಸ್ತೆಯಲ್ಲಿನ ಒಳಚರಂಡಿ (ಡ್ರೈನೇಜ್ ತುಂಬಿ ಹರಿಯುವುದನ್ನು) ಸರಿಪಡಿಸಿರುವ ಮೇಯರ್ ದಿವಾಕರ್ ರಿಗೆ ಅಭಿನಂದನೆ ವ್ಯಕ್ತಪಡಿಸಿರುವ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಮ್. ಮುತ್ತಲಿಬ್, ಅದೇ ಸಂಧರ್ಭದಲ್ಲಿ ಅಲ್ಲಿನ ರಸ್ತೆಗಳ ಅಭಿವೃದ್ಧಿ ಯೋಜನೆಯನ್ನು ಕೂಡಾ ಕೈಗೆತ್ತಿಕೊಳ್ಳಬೇಕು ಎಂದಿದ್ದಾರೆ.

ಮಳೆಗಾಲದ ನಂತರದ  ತೇಪೆ ಕಾರ್ಯಗಳೂ ಆಗದೆ ಮೊದಲೇ ಹದಗೆಟ್ಟಿದ್ದ ಅಲ್ಲಿನ ರಸ್ತೆಗಳು ಒಳಚರಂಡಿ ಕಾಮಗಾರಿಯಿಂದಾಗಿ ಇನ್ನಷ್ಟು ದುಸ್ತರವಾಗಿದ್ದು, "ಹೆಣ ಹೊರುವವನಿಗೆ, ಕೂದಲು ಹೊರೆಯಾಗದು" ಎಂಬಂತೆ ಈ ಬಗ್ಗೆ ಇನ್ನಾದರೂ ನಗರ ಪಾಲಿಕೆಯು ಕೂಡಲೇ ಕಾರ್ಯ ಪ್ರವೃತ್ತವಾಗಬೇಕಾದ ಅಗತ್ಯವಿದೆಯೆಂಬುವುದಾಗಿ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News